Wednesday, February 11, 2026
Homeಕ್ರೈಮ್ಧರ್ಮಸ್ಥಳ : ಪಾಯಿಂಟ್‌ 13ರ ಶೋಧ ಕಾರ್ಯ ಅಂತ್ಯ: 18 ಅಡಿ ಆಳ ಗುಂಡಿ ತೋಡಿದರೂ...

ಧರ್ಮಸ್ಥಳ : ಪಾಯಿಂಟ್‌ 13ರ ಶೋಧ ಕಾರ್ಯ ಅಂತ್ಯ: 18 ಅಡಿ ಆಳ ಗುಂಡಿ ತೋಡಿದರೂ ಸಿಗದ ಮೂಳೆ!

ದಕ್ಷಿಣ ಕನ್ನಡ: ಸತತ ಎರಡು ದಿನಗಳಿಂದ ನಡೆಯುತ್ತಿದ್ದ ಪಾಯಿಂಟ್‌ 13ರ ಶೋಧ ಕಾರ್ಯ ಅಂತ್ಯಗೊಂಡಿದ್ದು ಯಾವುದೇ ಮೂಳೆ ಸಿಕ್ಕಿಲ್ಲ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿರುವ ಮುಸುಕುಧಾರಿ ಆರೋಪದ ಮೇರೆಗೆ ಎಸ್‌ಐಟಿ ಶೋಧ ಕಾರ್ಯ ಆರಂಭಿಸಿ ಇಂದಿಗೆ 14 ಕಳೆದಿದೆ. ದೂರುದಾರನ ಮನವಿಯಂತೆ ಪಾಯಿಂಟ್ 13ರ ಉತ್ತರ ದಿಕ್ಕಿನಲ್ಲಿ ಶೋಧಕಾರ್ಯ ನಡೆಯಿತು. 

ಸಣ್ಣ ಹಿಟಾಚಿ ಬಳಿಕ ದೊಡ್ಡ ಹಿಟಾಚಿ ಯಂತ್ರದ ಮೂಲಕ ಗುಂಡಿ ತೋಡುವ ಕಾರ್ಯ ನಡೆಯಿತು. ಉತ್ಖನನದ ವೇಳೆ ಮಳೆ ಬಂದು ಗುಂಡಿಯಲ್ಲಿ ನೀರು ಒರತೆ ರೂಪದಲ್ಲಿ ಬರುತ್ತಿತ್ತು.

ಎಸ್‌ಐಟಿ ಅಧಿಕಾರಿಗಳು ಪಂಪ್‌ಸೆಟ್ ಮೂಲಕ ಗುಂಡಿಯಲ್ಲಿದ್ದ ನೀರನ್ನು ಹೊರ ಹಾಕಿದರು. 32 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳ ಗುಂಡಿ ತೋಡಿದರೂ ಯಾವುದೇ ಮೂಳೆಗಳು ಪತ್ತೆಯಾಗಲಿಲ್ಲ. ಸತತ 6 ಗಂಟೆ ಕಾರ್ಯಾಚರಣೆ ನಡೆಸಿದರೂ ಏನು ಸಿಗದ ಕಾರಣ ಕೊನೆಗೆ ತೆಗೆದ ಗುಂಡಿಗೆ ಅದೇ ಮಣ್ಣನ್ನು ಸುರಿದು ಮುಚ್ಚಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!