Wednesday, February 18, 2026
Homeಕ್ರೈಮ್ತೀರ್ಥಹಳ್ಳಿ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಬಿಯರ್‌ ಬಾಟಲಿಯಿಂದ ಯುವತಿಗೆ ಇರಿದ ಪಾಗಲ್‌ ಪ್ರೇಮಿ!

ತೀರ್ಥಹಳ್ಳಿ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಬಿಯರ್‌ ಬಾಟಲಿಯಿಂದ ಯುವತಿಗೆ ಇರಿದ ಪಾಗಲ್‌ ಪ್ರೇಮಿ!


ಶಿವಮೊಗ್ಗ: ಪ್ರೇಮಿಗಳ ದಿನದಂದು ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದ ಯುವತಿಗೆ ಯುವಕನೊಬ್ಬ ಬಿಯರ್‌ ಬಾಟಲಿಯಲ್ಲಿ ಇರಿದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಸಮೀಪ ನಡೆದಿದೆ.

ಪ್ರೇಮಿಗಳ ದಿನದಂದು ಯುವತಿಗೆ ಸ್ವರೂಪ್ ಎಂಬಾತ ಪ್ರೇಮ ನಿವೇದನೆ ಮಾಡಿದ್ದ. ಯುವತಿ ಆತನ ಪ್ರಪೋಸ್‌ನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡು ಯುವತಿಯ ಕೈಗೆ ಮತ್ತು ಕುತ್ತಿಗೆ ಭಾಗಕ್ಕೆ ಬಿಯರ್ ಬಾಟಲಿಯಿಂದ ಸ್ವರೂಪ್ ಇರಿದಿದ್ದಾನೆ. ಯುವತಿಗೆ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಮಿಕ ಚಿಕಿತ್ಸೆ ನೀಡಿ‌, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪಾನಮತ್ತನಾಗಿದ್ದ ಆತನನ್ನು ಜಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!