Wednesday, March 25, 2026
Homebig breakingಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾನು ರೆಡಿ ಎಂದ ಶ್ರೀರಾಮುಲು - ಕಮಲ ಪಕ್ಷದಲ್ಲಿ ಸಂಚಲನ ಮೂಡಿಸಿದ ಸ್ಪೋಟಕ...

ಬಿಜೆಪಿ ರಾಜ್ಯಾಧ್ಯಕ್ಷನಾಗಲು ನಾನು ರೆಡಿ ಎಂದ ಶ್ರೀರಾಮುಲು – ಕಮಲ ಪಕ್ಷದಲ್ಲಿ ಸಂಚಲನ ಮೂಡಿಸಿದ ಸ್ಪೋಟಕ ಹೇಳಿಕೆ..!

ಕೋಲಾರ : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದೆ. ನಾಯಕತ್ವ ಬದಲಾವಣೆಗಾಗಿ ಆಗ್ರಹಿಸಿರುವ ಒಂದು ಗುಂಪು ದೆಹಲಿಗೆ ತೆರಳಿದೆ. ಈ ನಡುವೆ ಪಕ್ಷದ ರಾಜ್ಯ ಉಸ್ತುವಾರಿ ಮತ್ತು ಜನಾರ್ದನ ರೆಡ್ಡಿ ವಿಚಾರವಾಗಿ ಸಿಡಿಮಿಡಿಗೊಂಡಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ನೀಡಿರುವ ಹೇಳಿಕೆ, ಬಿಜೆಪಿಯಲ್ಲಿ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.
ಕೋಲಾರದಲ್ಲಿ ಮಾತನಾಡಿರುವ ರಾಮುಲು, ನಾನು ರಾಜ್ಯಧ್ಯಕ್ಷನಾಗಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ‘ನಾನು ಬಿಜೆಪಿಯಲ್ಲಿ ಅಧ್ಯಕ್ಷನಾದರೆ ಈ ಗುಂಪುಗಾರಿಕೆಯನ್ನು ನಿಲ್ಲಿಸುತ್ತೇನೆ. ನಾನು ರಾಜ್ಯ ಬಿಜೆಪಿ ಅಧ್ಯಕ್ಷನಾಗಲು ಸಿದ್ದನಿದ್ದೇನೆ. ಯಡಿಯೂರಪ್ಪನವರ ಆರ್ಶೀವಾದ ಮತ್ತು ಹೈಕಮಾಂಡ್​ ಬಯಸಿದರೆ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದಿದ್ದಾರೆ.
‘ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷನಾಗಲು ಕಾರಣ ಯಡಿಯೂರಪ್ಪ. ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಬದಲಾದರೆ ನಾನು ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧನಿದ್ದೇನೆ. ಈಗಿನ ಸ್ಥಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆ ಇದೆ. ನಾನು ಅಧ್ಯಕ್ಷನಾದರೆ 2028ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ರಾಜ್ಯದಲ್ಲಿ ಬಿಜೆಪಿಗೆ 150 ಸೀಟ್​ಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ತರುತ್ತೇನೆ, ನಾನು ಅಧ್ಯಕ್ಷನಾಗಲು ಬಸನಗೌಡ ಯತ್ನಾಳರ ಸಹಮತವಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!