Monday, August 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಕೃಷಿ ಜಮೀನಿಗೆ ಎಂಟ್ರಿ ಕೊಡುತ್ತಿದ್ದ ಕಾಡಾನೆ: ಟಾರ್ಚ್ ಬೆಳಕು ಬಿಟ್ಟು ಓಡಿಸಿದ ಗ್ರಾಮಸ್ಥರು

ಚಿಕ್ಕಮಗಳೂರು: ಕೃಷಿ ಜಮೀನಿಗೆ ಎಂಟ್ರಿ ಕೊಡುತ್ತಿದ್ದ ಕಾಡಾನೆ: ಟಾರ್ಚ್ ಬೆಳಕು ಬಿಟ್ಟು ಓಡಿಸಿದ ಗ್ರಾಮಸ್ಥರು

Telegram Group
Join Now

ಚಿಕ್ಕಮಗಳೂರು : ಕೃಷಿ ಭೂಮಿಯಲ್ಲಿ ಬೀಡು ಬಿಟ್ಟ ಕಾಡಾನೆಯನ್ನು ಟಾರ್ಚ್​ ಬೆಳಕು ಹಾಯಿಸುವ ಮೂಲಕ ರೈತರು ಹಿಮ್ಮೆಟ್ಟಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಡಕೆ ತೋಟವೊಂದರಲ್ಲಿ ಕಾಡಾನೆಯೊಂದು ಬಂದು ಬೀಡು ಬಿಟ್ಟಿತ್ತು. ಇದರಿಂದಾಗಿ ಗ್ರಾಮದ ಜನರು ಭಯಭೀತರಾಗಿದ್ದರು. ಕೊನೆಗೆ ರೈತರು ಭಾರಿ ಶಬ್ಧ ಮಾಡುವ ಮೂಲಕ ಕಾಡಾನೆಯನ್ನು ಬೇರೆಡೆ ಓಡಿಸಿದ್ದಾರೆ.

ತೋಟ, ಗದ್ದೆ, ಹೊಲಕ್ಕೆ ಹೋಗುವ ಸಂದರ್ಭದಲ್ಲಿ ಯಾವ ಸಮಯದಲ್ಲಿ ಕಾಡಾನೆ ಬಂದು ಯಾರ ಮೇಲೆ ದಾಳಿ ಮಾಡುತ್ತೋ ಎಂಬ ಜೀವ ಭಯದಲ್ಲೇ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಸಂಚಾರ ಮಾಡುವಂತಾಗಿದೆ. ಹೀಗಾಗಿ, ಈ ಕೂಡಲೇ ಕಾಡಾನೆ ಸ್ಥಳಾಂತರಿಸಬೇಕು ಹಾಗೂ ಇದಕ್ಕೊಂದು ಶಾಶ್ವತ ಪರಿಹಾರ ಹುಡುಕಬೇಕು ಎಂದು ರೈತರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments