Thursday, November 5, 2026
Homeಕ್ರೈಮ್ಏರ್ ಗನ್ ಗುಂಡು ತಗುಲಿ 20 ವರ್ಷದ ಯುವಕ ನವೀನ್ ಸಾವು: ಪೋಷಕರಿಂದ ಕೊಲೆ ಆರೋಪ

ಏರ್ ಗನ್ ಗುಂಡು ತಗುಲಿ 20 ವರ್ಷದ ಯುವಕ ನವೀನ್ ಸಾವು: ಪೋಷಕರಿಂದ ಕೊಲೆ ಆರೋಪ

Telegram Group
Join Now

ಮೂಡಿಗೆರೆ:ತಾಲೂಕಿನ ಗೌರಿಕೆರೆ ಕುಮಾರ್ ಎಂಬುವರ ಮಗನಾದ ನವೀನ್ ಎಂಬಾತ ಏರ್ ಗನ್ ಗುಂಡು ತಗುಲಿ ಮರಣ ಹೊಂದಿದ ದುರ್ದೈವಿಯಾಗಿದ್ದು ಪೋಷಕರು ಕೊಲೆ ಆರೋಪ ಮಾಡಿದ್ದಾರೆ.

ಹೌದು ಇಬ್ಬರು ಸ್ನೇಹಿತರು ದನ ಕಟ್ಟಲು ಹೋದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಯುವಕ ಸ್ಥಳದಲ್ಲೇ ಅಸ್ವಸ್ತನಾಗಿದ್ದು ಪ್ರಥಮ ಚಿಕಿತ್ಸೆಗೆ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ತದನಂತರ ವೈದ್ಯರ ಸಲಹೆಯಂತೆ ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು ಹಾಗ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

ಯುವಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಮಗನನ್ನು ಬಲವಂತವಾಗಿ ಕರೆದೊಯ್ದು ಜಗಳವಾಡಿ ಕೃತ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದೂ ಜಾನುವಾರು ಗುದ್ದಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಪಟ್ಟಿದ್ದು ಅನುಮಾನ ಬಂದ ಕಾರಣ ಖುದ್ದಾಗಿ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ನೋಡಿದಾಗ ತುರ್ತು ಚಿಕಿತ್ಸ ಕೊಠಡಿಯಲ್ಲಿ ಇಟ್ಟಿದ್ದರು, ನಾಲ್ವರು ಸ್ನೇಹಿತರು ಸೇರಿ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ

ಯುವಕನ ಸಾವಿಗೆ ನಿಖರ ಕಾರಣವೇನು? ಘಟನೆಗೆ ಕಾರಣವಾದ ಹಿನ್ನೆಲೆ ಏನು? ಆರೋಪಿಗಳ ಪಾತ್ರವೇನು? ಎಂಬ ಸಂಪೂರ್ಣ ಸತ್ಯಾಂಶಗಳು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!