Friday, April 10, 2026
Homeಜಿಲ್ಲಾಸುದ್ದಿ2nd PU Result: ಮೂಡಿಗೆರೆಯ ಬಿಜಿಎಸ್ ಒಕ್ಕಲಿಗರ ಸಂಘ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ...

2nd PU Result: ಮೂಡಿಗೆರೆಯ ಬಿಜಿಎಸ್ ಒಕ್ಕಲಿಗರ ಸಂಘ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ!

ಮೂಡಿಗೆರೆ: 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬಿಜಿಎಸ್ ಒಕ್ಕಲಿಗರ ಸಂಘ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 78 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 78 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇಕಡಾ 100ರಷ್ಟು ಫಲಿತಾಂಶ ದಾಖಲಾಗಿರುತ್ತದೆ. ಅದರಲ್ಲೂ ಕು. ಹೇಮಾ ಸಿಂಧೂರ ಬಿ.ಎಸ್ ಎಂಬ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ 595 ಅಂಕ ಪಡೆದು ಶೇ 99.17%ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದು ಜಿಲ್ಲೆ ಮತ್ತು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡಾ 100 ರಷ್ಟು ಫಲಿತಾಂಶ ಲಭಿಸಿರುತ್ತದೆ ಅದರಲ್ಲಿ 17 ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿರುತ್ತಾರೆ.

ಸಾಕೇತ್ ಎಸ್ ಎಂಬ ವಿದ್ಯಾರ್ಥಿಯು 586ಅಂಕ ಪಡೆದು ಶೇ 97.67ರಷ್ಟು ಫಲಿತಾಂಶ ಪಡೆದಿರುತ್ತಾರೆ ಹಾಗೂ ವಿಜ್ಞಾನ ವಿಭಾಗದಲ್ಲಿ 43 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡಾ 100ರಷ್ಟು ಫಲಿತಾಂಶ ದಾಖಲಾಗಿರುತ್ತದೆ. ಅದರಲ್ಲಿ 24 ವಿದ್ಯಾರ್ಥಿಗಳು ಅತ್ಯುನ್ನತ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿರುತ್ತಾರೆ. ಕು. ರಹಮಾ ಮುಮ್ತಾಜ್. ಎಂ. ಕೆ ಎಂಬ ವಿದ್ಯಾರ್ಥಿನಿ 576 ಅಂಕಗಳನ್ನು ಪಡೆದು ಶೇ 96. ರಷ್ಟು ಫಲಿತಾಂಶ ಪಡೆದಿರುತ್ತಾರೆ ಹಾಗು .ಕು. ಶ್ರೇಯಾ ಗೌಡ ಎನ್. ಎಸ್ ಎಂಬ ವಿದ್ಯಾರ್ಥಿನಿ 572 ಅಂಕಗಳನ್ನು ಪಡೆದು ಶೇಕಡಾ 95.33ರಷ್ಟು ಫಲಿತಾಂಶ ಪಡೆದಿರುತ್ತಾರೆ.

ವಿಷಯಾವಾರು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದ ವಿವರ :
1)ಕನ್ನಡ – 06
2)ವ್ಯವಹಾರ ಅಧ್ಯಯನ -05
3)ಗಣಕ ವಿಜ್ಞಾನ -02
4) ಅರ್ಥಶಾಸ್ತ್ರ -02
5) ಲೆಕ್ಕಾ ಶಾಸ್ತ್ರ-01
6)ಗಣಿತ ಶಾಸ್ತ್ರ -01


ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ನ ಶೃಂಗೇರಿ ಶಾಖೆಯ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮೀಜಿಯವರು ಹಾಗೂ ಕಾಲೇಜಿನ ಪ್ರಾಚಾರ್ಯರಾದ ಸಂದೇಶ್ ಎಂ.ಆರ್ ಮತ್ತು ಉಪನ್ಯಾಸಕರು ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!