Tuesday, July 14, 2026
Homeಜಿಲ್ಲಾಸುದ್ದಿ2nd PUC Results 2026: ಚಿಕ್ಕಮಗಳೂರಿನ ಬಿ.ಜಿ.ಎಸ್ ಎಕ್ಸ್ಪರ್ಟ್ಸ್ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್

2nd PUC Results 2026: ಚಿಕ್ಕಮಗಳೂರಿನ ಬಿ.ಜಿ.ಎಸ್ ಎಕ್ಸ್ಪರ್ಟ್ಸ್ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್

Telegram Group
Join Now

2025–26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಚಿಕ್ಕಮಗಳೂರಿನ ಬಿ.ಜಿ.ಎಸ್ ಎಕ್ಸ್ಪರ್ಟ್ಸ್ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ.‌ ವಿಜ್ಞಾನ ವಿಭಾಗದಲ್ಲಿ ಕುಮಾರಿ ಎಚ್. ಜಿ. ತೃಪ್ತಿ 600ಕ್ಕೆ 592 ಅಂಕ ಹಾಗೆ ವಾಣಿಜ್ಯ ವಿಭಾಗದಿಂದ ಇಂಪನ ಸಿ ಅವರು 600ಕ್ಕೆ 587 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿನ ಒಟ್ಟು ಫಲಿತಾಂಶ ಶೇಕಡ 96.98 ಬಂದಿದ್ದು ವಿಜ್ಞಾನ ವಿಭಾಗದಲ್ಲಿ ಶೇ. 96.03, ವಾಣಿಜ್ಯ ವಿಭಾಗದಿಂದ ಶೇ.98.63% ರಷ್ಟು ಫಲಿತಾಂಶ ಹೊರಬಿದ್ದಿದೆ.

ಇನ್ನೂ ವಿಜ್ಞಾನ ವಿಭಾಗದಲ್ಲಿ ಒಟ್ಟು ವಿದ್ಯಾರ್ಥಿಗಳು 126 ಇದ್ದು ಅದರಲ್ಲಿಅತ್ಯುನ್ನತ ಶ್ರೇಣಿ – 45, ಪ್ರಥಮ ದರ್ಜೆ – 73, ದ್ವಿತೀಯ ದರ್ಜೆ – 03 ವಿದ್ಯಾರ್ಥಿಗಳಾಗಿದ್ದಾರೆ.

ಹಾಗೆ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 73 ವಿದ್ಯಾರ್ಥಿಗಳಲ್ಲಿ ಅದರಲ್ಲಿ ಅತ್ಯುನ್ನತ ಶ್ರೇಣಿ – 22, ಪ್ರಥಮ ದರ್ಜೆ – 38, ದ್ವಿತೀಯ ದರ್ಜೆ – 11, ತೃತೀಯ ದರ್ಜೆ ಓರ್ವ ವಿದ್ಯಾರ್ಥಿ ಪಾಸ್ ಆಗಿದ್ದಾರೆ.


RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments