ಕೊಪ್ಪ: ಐದನೇ ಆವೃತ್ತಿಯ ಅಂತಾರಾಷ್ಟ್ರೀಯ ಮಟ್ಟದ ಪ್ರೈಮ್ ವಾಲಿಬಾಲ್ ಲೀಗ್ನಲ್ಲಿ ಕೋಲ್ಕತ್ತಾ ಥಂಡರ್ ರ್ಬೋಲ್ಟ್ಸ್ ತಂಡವನ್ನು ಕರ್ನಾಟಕದಿಂದ ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹುಲ್ಲುಮಕ್ಕಿ ಗ್ರಾಮದ ಶರಣ್ ಕೊಪ್ಪ ಅವರು ಪ್ರತಿನಿಧಿಸುತ್ತಿದ್ದಾರೆ.
ಹೌದು .. ಅವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹುಲ್ಲುಮಕ್ಕಿ ಗ್ರಾಮದ ಹೆಮ್ಮೆಯ ಪ್ರತಿಭೆ ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಗಾರ ಪ್ರಕಾಶ್ ಉಮಾ ಅವರ ದ್ವಿತೀಯ ಪುತ್ರನಾಗಿರುತ್ತಾನೆ.
ಐದನೇ ಆವೃತ್ತಿಯ ಅಂತಾರಾಷ್ಟ್ರೀಯ ಮಟ್ಟದ ಪ್ರೈಮ್ ವಾಲಿಬಾಲ್ ಲೀಗ್ನಲ್ಲಿ ಕೋಲ್ಕತ್ತಾ ಥಂಡರ್ ರ್ಬೋಲ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಂದೆ ತಾಯಿ ಖುಷಿ ಪಟ್ಟಿದ್ದಾರೆ.
ವಾಲಿಬಾಲ್ ಕ್ಷೇತ್ರದಲ್ಲಿ ತಮ್ಮ ಅದ್ಭುತ ಪ್ರತಿಭೆ, ಅಚಲ ಪರಿಶ್ರಮ ಹಾಗೂ ಅಮೋಘ ಪ್ರದರ್ಶನದ ಮೂಲಕ ಹಲವಾರು ಪಂದ್ಯಗಳ ಫಲಿತಾಂಶವನ್ನೇ ಬದಲಾಯಿಸಿದ ಯಶಸ್ವಿ ಆಲ್ರೌಂಡರ್ ಆಟಗಾರ ಶರಣ್ ಕೊಪ್ಪ.
ಕೇರಳದ ಪ್ರತಿಷ್ಠಿತ ಬಿಷಪ್ ಮೂರ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿರುವ ಅವರು, ಪ್ರಸ್ತುತ ಸ್ಪೋರ್ಟ್ಸ್ ಕೋಟಾದಡಿ ಮುಥೂಟ್ ಬ್ಲೂ ಸ್ಪೈಕರ್ಸ್ ತಂಡವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನ ಶಿಖರಗಳನ್ನು ಏರಲಿ. ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಇನ್ನಷ್ಟು ಕೀರ್ತಿ ತಂದುಕೊಡಲಿ ಎಂದು ಕೊಪ್ಪದ ಈ ಹೆಮ್ಮೆಯ ಪುತ್ರನಿಗೆ ಹಾರೈಸೋಣ.
