ಚಿಕ್ಕಮಗಳೂರು: ಮಕ್ಕಳು ಸೇರಿದಂತೆ 18 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ಕಂಡುಬಂದಿದೆ,

ಹೌದು .. ಅಜ್ಜಂಪುರ ತಾಲೂಕಿನ ನಾರಯಾಣಪುರ, ಜಾವೂರು, ತಿಮ್ಮಾಪುರ ಗ್ರಾಮಗಳಲ್ಲಿ ಹೆಚ್ಚಿದ ಹುಚ್ಚು ನಾಯಿ ಹಾವಳಿಯಿಂದ ಮಕ್ಕಳು ಸೇರಿದಂತೆ 18 ಜನರ ಮೇಲೆ ದಾಳಿ ಮಾಡಿದ್ದು ಕೂಡಲೇ ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಿಲಾಗಿದೆ..

ಇದರಿಂದಾಗಿ ನಾರಾಯಣಪುರ, ಜಾವೂರು ಗ್ರಾಮ ಪಂಚಾಯಿತಿಗಳಿಂದ ಗ್ರಾಮಸ್ಥರಿಗೆ ಎಚ್ಚರಿಕೆಯಿಂದಿರುವಂತೆ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಪ್ರತಿನಾಯಿಗೂ ಪಶು ಇಲಾಖೆ ಸಿಬ್ಬಂದಿಗಳಿಂಮ ಇಂಜೆಕ್ಷನ್ ಕೂಡ ಹಾಕಲಾಗುತ್ತಿದೆ

