ಧರ್ಮಸ್ಥಳ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತನ್ನ ವಿಡಿಯೋ ಮೂಲಕ ಮತ್ತೆ ಮುನ್ನಲೆಗೆ ತಂದಿದ್ದ ಖ್ಯಾತ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು ..ಯೂಟ್ಯೂಬರ್ ಸಮೀರ್ ಎಂಡಿ ನಿಗೂಢ ವ್ಯಕ್ತಿಗೆ ಸಂಬಂಧಿಸಿದಂತೆ ವೀಡಿಯೋ ಮಾಡಿದ್ದಲ್ಲದೇ
AI ವೀಡಿಯೋ ಕೂಡ ಮಾಡಿದ್ದ ಆರೋಪವಿದ್ದು ಹಾಗೆ ಸಮೀರ್ ಸುಳ್ಳು ಮಾಹಿತಿಯ ವೀಡಿಯೋ ಮಾಡಿದ್ದಾರೆಂದು ದೂರು ನೀಡಲಾಗಿದೆ.
ಹಾಗೆ ಕಾಲ್ಪನಿಕವಾಗಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ ಇದರಿಂದ ಸಾರ್ವಜನಿಕರು ಉದ್ರೇಕಗೊಳ್ಳುವಂತೆ ಮಾಡುತ್ತಿದ್ದಾರೆಂದು ಆರೋಪಿಸಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಮೀರ್ ಶನಿವಾರ ಧರ್ಮಸ್ಥಳದಲ್ಲಿ ಸೌಜನ್ಯ ಒಂದೇ ಅಲ್ಲ ಅದೇ ರೀತಿ ಹತ್ತಾರು ಹೆಣ್ಣು ಮಕ್ಕಳ ಕೊಲೆಗಳು ನಡೆದಿವೆ ಎಂದು ವೀಡಿಯೋ ಅಪ್ಲೋಡ್ ಮಾಡಿದ್ದ ಇದು ಒಂದೇ ದಿನದಲ್ಲಿ 25 ಲಕ್ಷ ವ್ಯೂವ್ಸ್ ಪಡೆದುಕೊಂಡಿರುವ ವೀಡಿಯೋ ಸಹ ಆಗಿತ್ತು.