Monday, July 13, 2026
Homeಕ್ರೈಮ್ಬಾಳೆಹೊನ್ನೂರು: ಮೊಬೈಲ್ ಬ್ಯಾಂಕಿಂಗ್ ಅಪ್ಡೇಟ್ ಮಾಡುವಾಗ 1.97 ಲಕ್ಷ ವಂಚನೆ!

ಬಾಳೆಹೊನ್ನೂರು: ಮೊಬೈಲ್ ಬ್ಯಾಂಕಿಂಗ್ ಅಪ್ಡೇಟ್ ಮಾಡುವಾಗ 1.97 ಲಕ್ಷ ವಂಚನೆ!

Telegram Group
Join Now

ಚಿಕ್ಕಮಗಳೂರು: ಮೊಬೈಲ್ ಬ್ಯಾಂಕಿಂಗ್ ಅಪ್ಡೇಟ್ ಮಾಡುವಾಗ 1.97 ಲಕ್ಷ ರೂ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಳೆಹೊನ್ನೂರು ವಾಸಿ ಅಕ್ಷಯ್ ಎಂ ಬೆಂಗಳೂರಿನ ಹಲಸೂರಿನ ಶಾಖೆಯಲ್ಲಿ AXIS BANK ಖಾತೆ ತೆರೆದಿದ್ದು   ಮೊಬೈಲ್ ಬ್ಯಾಂಕಿಂಗ್ ಆಪ್ ಗೆ ಹೋಗಿ ಪರಿಶೀಲಿಸಿದಾಗ ಆಪ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ.

ಕ್ರೆಡಿಟ್‌ಕಾರ್ಡ್‌ಗೆ ಹೆಚ್ಚಿನ ವ್ಯಹಹಾರದ ಪರಿಮಿತಿ ಪಡೆದುಕೊಳ್ಳಲು ಬಳಸುತ್ತಿದ್ದ ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಿ ಪರಿಶೀಲಿಸಿದಾಗ ಆಪ್ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ.ನನ್ನ ಮೊಬೈಲ್‌ಗೆ ಸಂಜೀವ ಎಂಬಾತ ಆಕ್ಸಿಸ್ ಬ್ಯಾಂಕ್ ಕಸ್ಟೂಮರ್ ಕೇರ್ ನಿಂದ ಪೋನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡನ ಕೊನೆಯ 4 ನೇ ಸಂಖ್ಯೆ ಕೇಳಿದ್ದು ನಾನು ಸಂಖ್ಯೆ ಸರಿಯಿದ್ದುದರಿಂದ ಹೆಚ್ಚಿನ ಪರಿಮಿತಿ ಪಡೆಯಲು ಮೊಬೈಲ್ ಬ್ಯಾಂಕಿಂಗ್ ಆಪ್‌ಗೆ ಹೋಗಲು ಹೇಳಿದ್ದು, ಆಗ ಕೂಡ ಆಪ್ ಒಪನ್ ಆಗದ ಕಾರಣ ಲಿಂಕ್ ಗೆ ಹೋಗಲು ತಿಳಿಸಿದಾಗ ನಾನು ಗೂಗಲ್ ಕ್ರೋಮ್ ನಲ್ಲಿ ಲಿಂಕ್ ನ್ನು ಓಪನ್ ಮಾಡಿ ನೋಡಿದ್ದು ಆಕ್ಸಿಸ್ ಬ್ಯಾಂಕ್ ನ ವೆಬ್ ಅಪ್ಲಿಕೇಷನ್ ರೀತಿಯೇ ಇದ್ದು ಅದರೊಳಗೆ ಹೋಗಲು ಲಾಗಿನ್ ಆಪ್ಷನ್ ಬಂದಿದ್ದು ಲಾಗಿನ್ ಆಗಲು ನನ್ನ ಮೊಬೈಲ್ ಸಂಖ್ಯೆ ಮತ್ತು ಕ್ರೇಡಿಟ್ ಕಾರ್ಡ ಸಂಖ್ಯೆ ನಮೂದಿಸಿರುತ್ತೇನೆ.

ನಂತರ ಇನ್‌ಕರೆಕ್ಷನ್ ಸಪೋರ್ಟ್ ಎಂದು ಮೆಸೇಜ್ ಬಂದಿದ್ದು ನಂತರ ಕೇವಲ 1 ನಿಮಿಷದೊಳಗೆ ನನ್ನ ಕ್ರೆಡಿಟ್ ಕಾರ್ಡ ನಿಂದ 1,97,841 ರೂ ಹಣವು ರಿಲೆಯನ್ಸ ರಿಟೈಲ್‌ಗೆ ಕಟ್ ಆಗಿದ್ದು ಕೂಡಲೇ ಪೋನ್ ಲೈನಿನಲ್ಲಿದ್ದ ವ್ಯಕ್ತಿಯು ಪೋನ್ ಕಾಲ್ ಕಟ್ ಮಾಡಿರುತ್ತಾನೆ.

ನಂತರ ನಾನು ಮೋಸ ಹೋಗಿರುವುದು ತಿಳಿಯಿತು. ನನ್ನಿಂದ ಲಿಂಕ್ ಓಪನ್ ಮಾಡಿಸಿ ಮೋಸದಿಂದ ಹಣವನ್ನು ಪಡೆದಿರುವ ಸಂಜೀವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣವನ್ನು ವಾಪಾಸ್ ಕೊಡಿಸಬೇಕಾಗಿ ಕೋರಿ ಅಕ್ಷಯ್ ಬಾಳೆಹೊನ್ನೂರು ಪೊಲೀಸರಿಗೆ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments