Thursday, September 10, 2026
Homeಜಿಲ್ಲಾಸುದ್ದಿಕಸ್ತೂರಿ ರಂಗನ್ ವರದಿ ವಿರೋಧಿಸಿ ಬಾಳೆಹೊನ್ನೂರು ಬಂದ್:‌ ಬೃಹತ್‌ ಮೆರವಣಿಗೆ, ವ್ಯಾಪಕ ಬೆಂಬಲ!

ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಾಳೆಹೊನ್ನೂರು ಬಂದ್:‌ ಬೃಹತ್‌ ಮೆರವಣಿಗೆ, ವ್ಯಾಪಕ ಬೆಂಬಲ!

Telegram Group
Join Now

 ಬಾಳೆಹೊನ್ನೂರು:  ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಭಾಗದಲ್ಲಿ ಸಮಸ್ಯೆ ಹಿನ್ನಲೆಯಲ್ಲಿ ಮಲೆನಾಡು ಭಾಗದ ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.‌ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕರೆ ನೀಡಿರುವ ಬಂದ್‌ ಗೆ ವ್ಯಾಪಕ ಬೆಂಬಲ ಸಿಕ್ಕಿದೆ.

ಬೆಳಗ್ಗೆಯಿಂದಲೂ ಅಂಗಡಿ ಮುಂಗಟ್ಟು ಮುಚ್ಚಿ ವ್ಯಾಪರಸ್ಥರು ಬಂದ್‌ ಗೆ ಸಾಥ್‌ ನೀಡಿದ್ದು ವಾಹನ ಸಂಚಾರ ವಿರಳಗಂಡಿದ್ದು ಇಡೀ ನಗರ ಸಂಪೂರ್ಣ ಸ್ತಬ್ದವಾಗಿದೆ. ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮಲೆನಾಡ ಜನರ ಬದುಕಿಗೆ ಕಂಟಕವಾಗಿದ್ದು ಈ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲವೆಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!