Thursday, February 12, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಜವಾಹರ್ ನವೋದಯ ವಿದ್ಯಾಲಯಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ, ಪರಿಶೀಲನೆ!

ಬಾಳೆಹೊನ್ನೂರು: ಜವಾಹರ್ ನವೋದಯ ವಿದ್ಯಾಲಯಕ್ಕೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ, ಪರಿಶೀಲನೆ!

ಎನ್ ಆರ್.ಪುರ: ವ್ಯಕ್ತಿ ,ಜಾತಿಗಿಂತ ದೇಶ ಮೊದಲು ದೇಶವೇ ಮೊದಲು ಎಂದು ಜವಾಹರ್ ನವೋದಯ ವಿದ್ಯಾಲಯಕ್ಕೆ ಪರಿಶೀಲನಾ ಭೇಟಿ ನೀಡಿದ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಹೇಳಿದರು .‌

ಹೌದು .. ಬಾಳೆಹೊನ್ನೂರಿನ ಸಿಗೋಡು ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿ ಮಕ್ಕಳನ್ನು ಉದ್ದೇಶಿಸಿ ಮಾತಾನಾಡಿದ ಅವರು ಹಾವಾಡಿಗರ ದೇಶ ಬಿಕ್ಷುಕರ ದೇಶ ಎಂದು ಕರೆಯುತ್ತಿದ್ದ ರಾಷ್ಟ್ರ ಇಂದು ಜಾಗತಿಕವಾಗಿ ಇತರೆ ದೇಶಗಳಿಗೆ ಸಾಲ ನೀಡುವ ಹಾಗೂ ಬ್ರಹ್ಮೋಸ್ ನಂತಹ ಸಶಸ್ತ್ರಗಳನ್ನು ಪೂರೈಸುವ ದೇಶವಾಗಿ ಬೆಳಿದಿದೆ . ಎಲ್ಲದಕ್ಕಿಂತ ದೇಶವೇ ಮೊದಲು ಎನ್ನುವ ವಿಚಾರದೊಂದಿಗೆ ಸಾಗಿದಾಗ ಮಾತ್ರ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ವಿದ್ಯಾರ್ಥಿ ಜೀವನದಿಂದಲೇ ನಾವು ಅದನ್ನು ಮೈಗೂಡಿಸಿಕೊಳ್ಳಬೇಕು ರಾಷ್ಟ್ರದ ಅತ್ಯುತ್ತಮ ವಿದ್ಯಾಕೇಂದ್ರಗಳಲ್ಲಿ ಒಂದಾಗಿರುವ ನವೋದಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದೆ ಎಂದರು .

ಹಾಗೆ ವಿದ್ಯಾರ್ಥಿಗಳನ್ನು ವಿಚಾರಿಸಿದ ಸಂಸದರು ಏನಾದರೂ ಸಮಸ್ಯೆಗಳಿದ್ದರೆ ತಿಳಿಸಲು ಹೇಳಿದರು . ಪೋಷಕರ ಮತ್ತು ಶಿಕ್ಷಕರ ಪರಿಷತ್ತಿನ ಸದಸ್ಯರು ಕೆಲವು ಮೂಲಭೂತ ಸೌಕರ್ಯಗಳನ್ನು ಇನ್ನೂ ವಿಸ್ತರಿಸುವಂತೆ ಮನವಿ ಮಾಡಿದರು.ಸಂಸದರು ಅದನ್ನು ಶೀಘ್ರವಾಗಿ ಪೂರೈಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದರು. ಹಾಗೂ ಹೊಸ ಹೆಚ್ಚುವರಿ ಬಾಲಕರ ವಸತಿ ನಿಲಯವನ್ನು ಶೀಘ್ರವಾಗಿ ತೆರೆಯುವುದಾಗಿಯೂ ತಿಳಿಸಿದರು .

ವಿಧ್ಯಾರ್ಥಿಗಳ ಆನ್ಲೈನ್ ಕೋಚಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇಂಟರ್ನೆಟ್ ನ ಸೌಲಭ್ಯವನ್ನು ಹೆಚ್ಚಿಸಲು ಸ್ಥಳದಲ್ಲೇ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸೂಚಿಸಿ ವಿದ್ಯುತ್ ಪೂರೈಕೆಯ ಸಮಸ್ಯೆಯನ್ನು ಕೂಡಲೇ ಸರಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಮುಂದಿನ ಒಂದು ತಿಂಗಳಿನ ನಂತರ ಮತ್ತೆ ಪ್ರಗತಿಯನ್ನು ಪರಿಶೀಲಿಸುವುದಾಗಿ ಹೇಳಿದರು .

ಪ್ರಾಂಶುಪಾಲ ಡೇನಿಯಲ್ , ಆಡಳಿತ ಮಂಡಳಿಯ ಕೆಟಿ ವೆಂಕಟೇಶ್ ಹಾಗೂ ನವೋದಯ ಪಿಟಿಸಿ ಸದಸ್ಯರಾದ ಪ್ರಭಾಕರ , ಉದಯಕುಮಾರ್, ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ,ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯರಾದ ವಿನೋದ್ ಬೊಗಸೆ , ಸ್ಥಳೀಯ ಮುಖಂಡರಾದ ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸಂತೋಷ್ ಅರನೂರ್ , ಹೋಬಳಿ ಅಧ್ಯಕ್ಷ ಕಾರ್ತಿಕ್ , ಪ್ರವೀಣ್ , ಸಂಜಯ್ ಹಾಗೂ ಶಿಕ್ಷಕರು , ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!