Sunday, August 9, 2026
Homeಜಿಲ್ಲಾಸುದ್ದಿಆಲ್ದೂರು: ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ : ಆಲ್ದೂರಿನಲ್ಲಿ ಖಾಕಿ ಪಥಸಂಚಲನ

ಆಲ್ದೂರು: ಗಣೇಶ ಚತುರ್ಥಿ & ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ : ಆಲ್ದೂರಿನಲ್ಲಿ ಖಾಕಿ ಪಥಸಂಚಲನ

Telegram Group
Join Now

ಚಿಕ್ಕಮಗಳೂರು: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ವತಿಯಿಂದ ಭದ್ರತಾ ಕ್ರಮಗಳ ಅಂಗವಾಗಿ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನ ಗಸ್ತು ನಡೆಸಲಾಯಿತು. ಕಾನೂನು & ಸುವ್ಯವಸ್ಥೆ ಕಾಪಾಡುವ ಸಂಬಂಧ, ಸಾರ್ವಜನಿಕರಲ್ಲಿ ವಿಶ್ವಾಸವನ್ನು ತುಂಬಲು ಹಾಗೂ ಪೊಲೀಸ್ ಪಡೆಯ ಸನ್ನದ್ಧತೆಯನ್ನು ಪ್ರದರ್ಶಿಸಿದರು.

ಹೌದು .. ಹಾಂದಿ ಹಾಗು ಗುಲ್ಲನ್ ಪೇಟೆ ಸೇರಿ ಮೆರವಣಿಗೆ ಸಾಗುವ ಪ್ರಮುಖ ಮಾರ್ಗಗಳಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್‌ ಪಿ ಡಿಎಆರ್ ತುಕಡಿಗಳೊಂದಿಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡು ವಾಹನಗಳಲ್ಲಿ ಗಸ್ತು ತಿರುಗಿದರು

ಹೆಚ್ಚುವರಿ ಪೊಲೀಸ್ ಅಧಿಕ್ಷಕ ಜಯಕುಮಾರ್ ಸಿಟಿ ನೇತೃತ್ವದಲ್ಲಿ ನಡೆಸಲಾದ ಈ ವಾಹನ ಗಸ್ತಿನಲ್ಲಿ ಹಬ್ಬದ ಗಣೇಶ್ ಉತ್ಸವ ಹಾಗೂ ಈದ್ ಮಿಲಾದ್ ಆಚರಣೆಯ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಪಡೆ ತಮ್ಮ ಸನ್ನದ್ಧತೆಯನ್ನು ಪ್ರದರ್ಶಿಸಿದರು.

ಈ ವೇಳೆ ಸಾರ್ವಜನಿಕಲ್ಲಿ ವಿಶ್ವಾಸ ಮೂಡಿಸಲು ಶಾಂತಿ ವ್ಯವಸ್ಥೆಯನ್ನು ಖಾತ್ರಿಪಡಿಸಲು ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ರೂಟ್ ಮಾರ್ಚ್ ಕೂಡ ಕೈಗೊಳ್ಳಲಾಯಿತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments