ಸಕಲೇಶಪುರ :ತಾಲೂಕಿನ ಬಾಳ್ಳುಪೇಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆ ಸಂಘದ ಅಧ್ಯಕ್ಷ ಬಿ.ಬಿ ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಘ ಈ ಸಾಲಿನಲ್ಲಿ ₹ 3,00,302 ಲಾಭ ಗಳಿಸಿದೆ.
ಹೈನುಗಾರರು ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. . ಅಲ್ಲದೆ, ಹಾಲು ಒಕ್ಕೂಟದಲ್ಲಿ ಬರುವಂತಹ ಸೌಲಭ್ಯಗಳನ್ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.ಡಿವಿಡೆಂಟ್ ₹ 1,23,494 ಇದ್ದು ಸಂಘದ ಅಭಿವೃದ್ಧಿ ಕೆಲಸಗಳ ಬಳಕೆಗೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದು ಸಂಘದ ಕಟ್ಟಡವನ್ನು ಮತ್ತಷ್ಟು ಆಧುನಿಕರಣ ಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್ ನಿಂಗರಾಜು ಮಾತನಾಡಿ,ಬಾಳ್ಳುಪೇಟೆ ಉತ್ಪಾದಕರ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲು ಅಧ್ಯಕ್ಷರು ನಿರ್ದೇಶಕರು ಹಾಗೂ ಸದಸ್ಯರ ಬದ್ಧತೆ ಕಾರಣವಾಗಿದೆ. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಜಿಲ್ಲಾ ಸಂಘದಿಂದ ಮಾಡಲಾಗುವುದು. ಸಂಘವು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕೆಂದರೆ ದಾನಿಗಳು ಹಾಗೂ ಸರ್ಕಾರದ ಸಹಾಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಶೇಖರಣೆಯಾಗುತ್ತಿರುವ ಹಾಲು ಅಮೆರಿಕದಂತಹ ದೇಶಗಳಿಗೆ ರಫ್ತುವಾಗುತ್ತಿರುವುದು ಸಂತೋಷದ ವಿಷಯ ಈ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲಿ ನಮ್ಮ ದೇಶ ಹೈನುಗಾರಿಕೆ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಗಣನೀಯ ಸಾಧನೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು. ಪಶುವೈದ್ಯಾಧಿಕಾರಿ ನಿತ್ಯಾನಂದ ಮಾತನಾಡಿ, ಮುಖ್ಯವಾಗಿ ರೈತರು ವ್ಯಾಕ್ಸಿನ್ ಕೊಡಿಸಬೇಕು. ವಸು ಆರೋಗ್ಯವಂತವಾಗಿದ್ದರೆ ಮಾತ್ರ ಶುದ್ಧ ಹಾಲು ದೊರೆಯಲು ಸಾಧ್ಯ ಹಸುಗಳು ವಾಸಿಸುವ ಕೊಟ್ಟಿಗೆಯನ್ನು ದಿನನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಸುಗಳಿಗೆ ತಗೂಲು ರೋಗಗಳಿಂದ ದೂರವಿರಿಸಬಹುದಾಗಿದೆ. ಹಸುಗಳಿಗೆ ಓಲೆ ಹಾಕಿಸುವ ಮೂಲಕ ಆಕಸ್ಮಿಕವಾಗಿ ಮೃತಪಟ್ಟ ಹಸುಗಳಿಗೆ 18 ಸಾವಿರ ಪರಿಹಾರ ಧನ ಸಿಗಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಹೆಚ್ಚು ಹಾಲು ಉತ್ಪಾರಾದ ಅಬ್ಬನ ಸಂಪತ್, ವಿಕ್ರಂ ಸಕ್ಪಾಲ್, ಮೋಹನ್ ಕುಮಾರ್ ಅವರು ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ನಿರ್ದೇಶಕರುಗಳಾದ ಎಂ.ಬಿ ನಾಗೇಶ್, ಎಂ.ಎಸ್ ಧರ್ಮ ಪ್ರಕಾಶ್ ಎಂ.ಎಂ ಸತ್ಯ ಪ್ರಕಾಶ್, ಆರ್ ಆನಂದಮೂರ್ತಿ, ಬಿ.ಎಚ್ ಶಂಭುಲಿಂಗ, ವನಿತಾ,ವೀಣಾ,ದೃಶ್ಯಮಣಿ,ಅಣ್ಣಪ್ಪ ನಿವೃತ್ತ ಶಿಕ್ಷಕರಾದ ದಿವಾಕರ್, ಬೆಳಗಾರರ ಸಂಘದ ಮಾಜಿ ಅಧ್ಯಕ್ಷ ಬಿ ಎನ್ ಬಸವಣ್ಣ, ಗ್ರಾ.ಪಂ ಸದಸ್ಯ ಸಂಜು ಸಂಘದ ಕಾರ್ಯದರ್ಶಿ ಎಂ.ಆರ್ ಜಯಪ್ರಕಾಶ್ ಸೇರಿದಂತೆ ವಿವಿಧ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
