Wednesday, June 10, 2026
Homeಕ್ರೈಮ್ಬೇಲೂರು: ಗಣಪತಿ ಮೂರ್ತಿ ಚಪ್ಪಲಿ ಹಾರ ಪ್ರಕರಣ: ಸೋಮವಾರ ಸ್ವಯಂ ಪ್ರೇರಿತ ಬಂದ್'ಗೆ ವಿಎಚ್ ಪಿ,...

ಬೇಲೂರು: ಗಣಪತಿ ಮೂರ್ತಿ ಚಪ್ಪಲಿ ಹಾರ ಪ್ರಕರಣ: ಸೋಮವಾರ ಸ್ವಯಂ ಪ್ರೇರಿತ ಬಂದ್’ಗೆ ವಿಎಚ್ ಪಿ, ಭಜರಂಗದಳ ಕರೆ

ಹಾಸನ ಜಿಲ್ಲೆ ಬೇಲೂರು ಪಟ್ಟಣದ ವರಸಿದ್ಧಿ ವಿನಾಯಕ ಗಣಪತಿ ಮೂರ್ತಿ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರ್ ಪಟ್ಟಣವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಹಾಸನ ಜಿಲ್ಲಾ ವಿ ಎಚ್. ಪಿ ಬಜರಂಗದಳ ಕರೆ ನೀಡಿದೆ..

ಈ ಕುರಿತು ಹಾಸನ ಪ್ರಖಂಡ ವಿಭಾಗ ಸಂಚಾಲಕ ಶ್ಯಾಮ್ ಮಾತನಾಡಿ ಇಂತಹ ಹೇಯ ಕೃತ್ಯ ಇಡೀ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದ್ದಲ್ಲದೆ..
ಅವಮಾನ ವಾಗಿದ್ದು.. ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಇಂತಹ ಘಟನೆಗಳು ಮುಂದುವರೆದಲ್ಲಿ ಹಿಂದೂ ಸಮಾಜ ಉಗ್ರ ಹೋರಾಟಕ್ಕೆ ಮುಂದಾಗುವುದು ಎಂದು ಎಚ್ಚರಿಕೆ ನೀಡಿದರು

ಹೇಯ ಕೃತ್ಯವನ್ನು ಖಂಡಿಸಿ ಸೆ. 22 ರ ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಸ್ವಯಂ ಪ್ರೇರಿತ ಬಂದ್ ನಡೆಯಲಿದೆ.

ಬೆಳಿಗ್ಗೆ 10ಕ್ಕೆ ಬಸ್ ನಿಲ್ದಾಣದ ಹಿಂಬಾಗದಲ್ಲಿರುವ ಚೆನ್ನಕೇಶವ ದೇವಾಲಯದ ಆವರಣದಲ್ಲಿ ಪ್ರತಿಭಟನಾ ಆರಂಭವಾಗಳಿದ್ದು ಶಾಂತಿ ಸಮಾಜದ ಉದ್ದೇಶದಿಂದ ನಾವು ಜನಪರವಾಗಿ ಬಂದ್ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಸಾಥ್ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!