Thursday, July 9, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು - ಹಾಸನ ಗಡಿ ಗ್ರಾಮದಲ್ಲಿ ಬೀಟಮ್ಮ ಗ್ಯಾಂಗ್‌ ಸಂಚಾರ: ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ETF ಸಿಬ್ಬಂದಿ

ಚಿಕ್ಕಮಗಳೂರು – ಹಾಸನ ಗಡಿ ಗ್ರಾಮದಲ್ಲಿ ಬೀಟಮ್ಮ ಗ್ಯಾಂಗ್‌ ಸಂಚಾರ: ಹದ್ದಿನ ಕಣ್ಣಿಟ್ಟು ಕಾಯುತ್ತಿರುವ ETF ಸಿಬ್ಬಂದಿ

Telegram Group
Join Now

ಚಿಕ್ಕಮಗಳೂರು- ಹಾಸನ ಜಿಲ್ಲೆಯ ಗಡಿ ಗ್ರಾಮದಲ್ಲಿ ಸಂಚಾರ ಮಾಡುತ್ತಿದ್ದ 8 ಕಾಡಾನೆಗಳ ಹಿಂಡಿನ ಬೀಟಮ್ಮ-2 ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಎಂಟ್ರಿ ನೀಡಿದೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು, ಜಿ.ಹೊಸಹಳ್ಳಿ, ಮಾಕೋನಹಳ್ಳಿ, ಬಾರದಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಳೆದ‌ ನಾಲ್ಕು ದಿನಗಳಿಂದ ಬೀಟಮ್ಮ ‌ಗ್ಯಾಂಗ್ ಬೀಡುಬಿಟ್ಟಿದೆ.

ಹಾಸನ ಜಿಲ್ಲೆಯ ಬೇಲೂರು ಭಾಗವಾಗಿ ಬೀಟಮ್ಮ ಗ್ಯಾಂಗ್ ಬಂದಿದ್ದು, ಭೀಮಾ ಬರುವ ಆತಂಕ ಸೃಷ್ಟಿಯಾಗಿದೆ. ಹೆಚ್ಚಾಗಿ ಬೀಟಮ್ಮ-2 ಗ್ಯಾಂಗ್​ನಲ್ಲಿ ಇರುತ್ತಿದ್ದ ಭೀಮಾ ಒಂಟಿಯಾಗಿ ದಾಂಧಲೆ ನಡೆಸುತ್ತಿದ್ದು, ಬೀಟಮ್ಮ ಗ್ಯಾಂಗ್ 2 ಹುಡುಕಿಕೊಂಡು ಕಾಫಿನಾಡಿಗೆ ಬರುವ ಆತಂಕ ಸೃಷ್ಟಿಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಗೋಣಿಬೀಡು ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 8 ಕಾಡಾನೆಗಳ ಬೀಟಮ್ಮ ಗ್ಯಾಂಗ್, ರಾತ್ರಿ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚಾರ ಮಾಡುತ್ತಿದೆ. ಮೂಡಿಗೆರೆ ಅರಣ್ಯ ಇಲಾಖೆಯ ಸಿಬ್ಬಂದಿ, ETF ಸಿಬ್ಬಂದಿಗಳು ಬೀಟಮ್ಮ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments