ಹಾಸನ: ಅಕ್ರಮ ಬಾಂಗ್ಲಾ ನುಸುಳುಕೋರರ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಆಗಮಿಸಿರುವ ತಂಡ ಆಲೂರು ತಾಲ್ಲೂಕಿನ, ವಾಟೇಪುರ ಗ್ರಾಮಕ್ಕೆ ಆಗಮಿಸಿದ ಬಿಜೆಪಿ ರೆಬಲ್ಸ್ ಟೀಂ.

ಶಾಸಕ ಬಿ.ಪಿಮಹರೀಶ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಆಗಮಿಸಿದ್ದಾರೆ
ವಾಟೇಪುರ ಎಸ್ಟೇಟ್‌ನಲ್ಲಿ ಸ್ಥಳೀಯ ಕಾರ್ಮಿಕರ ಜೊತೆ ಸಂವಾದ ನಡೆಸಿದ ಅವರು ಹಾಗೆ ಸ್ಥಳೀಯ ಕಾರ್ಮಿಕರ ಸಮಸ್ಯೆಯನ್ನು ಕೂಡ ರೆಬಲ್ಸ್ ಟೀಂ ಆಲಿಸಿದೆ. ಹಾಗೆ ಹೊರ ರಾಜ್ಯದ ಕಾರ್ಮಿಕರಿಂದ ಕೆಲಸವಿಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡ ಸ್ಥಳೀಯ ಕಾರ್ಮಿಕರು
ನಂತರ ಕೆಂಚಮ್ಮನ ಹೊಸಕೋಟೆ, ಸಕಲೇಶಪುರ ತಾಲ್ಲೂಕಿನ, ಕುಂಬ್ರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಕೂಡ ಸ್ಥಳೀಯರ ಸಮಸ್ಯೆಯನ್ನು ಆಲಿಸಿದರು.

ಆ ನಂತರ ಅಸ್ಸಾಂನಿಂದ ಬಾರಿ ಸಂಖ್ಯೆಯಲ್ಲಿ ಕಾರ್ಮಿಕರು ಈ ಭಾಗಕ್ಕೆ ಆಗಮಿಸಿದ್ದಾರೆಅವರಿಂದಾಗಿ ನಮಗೆ ಕೂಲಿ ಇಲ್ಲದಂತಾಗಿದೆದೊಡ್ಡ ದೊಡ್ಡ ಎಸ್ಟೇಟ್‌ನವರು ನಮಗೆ ಕೆಲಸ ಕೊಡುತ್ತಿಲ್ಲ ಕೂಲಿ ಕೆಲಸವಿಲ್ಲದೆ ಬದುಕು ಕಷ್ಟವಾಗಿದೆ ಯಾರೂ ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ಮಾಜಿ ಸಚಿವರುಗಳ ಬಳಿ ಅಳಲು ತೋಡಿಕೊಂಡ ಸ್ಥಳೀಯ ಕಾರ್ಮಿಕರು
ನಿಮಗೆ ಸಿದ್ದರಾಮಯ್ಯ ಅವರ ಎರಡು ಸಾವಿರ ಬರ್ತಿದಿಯಾ ಎಂದ ಕೇಳಿದ ಕುಮಾರಬಂಗಾರಪ್ಪ ಬರ್ತಿಲ್ಲ ಎಂದ ಕೆಲವರು, ಬರ್ತಿದೆ ಎಂದ ಕೆಲವರು ಹಾಗೆ ಕುಮಾರಬಂಗಾರಪ್ಪ ಜೊತೆ ಫೋಟೋ ಮುಗಿಬಿದ್ದ ಮಹಿಳೆಯರು
