Tuesday, July 14, 2026
Homeಕ್ರೈಮ್ಚಿಕ್ಕಮಗಳೂರು: ಗ್ರಾಮಲೆಕ್ಕಿಗರೊಬ್ಬರಿಗೆ ನಕಲಿ ಚಿನ್ನ, ಬೆಳ್ಳಿ ಗಟ್ಟಿ ನೀಡಿ 45.23 ಲಕ್ಷ ವಂಚನೆ!

ಚಿಕ್ಕಮಗಳೂರು: ಗ್ರಾಮಲೆಕ್ಕಿಗರೊಬ್ಬರಿಗೆ ನಕಲಿ ಚಿನ್ನ, ಬೆಳ್ಳಿ ಗಟ್ಟಿ ನೀಡಿ 45.23 ಲಕ್ಷ ವಂಚನೆ!

Telegram Group
Join Now

ಚಿಕ್ಕಮಗಳೂರು : ಗ್ರಾಮಲೆಕ್ಕಿಗರೊಬ್ಬರಿಗೆ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ ಲಾಭಮಾಡಿಕೊಡುವ ಆಮಿಷವೊಡ್ಡಿದ ಬ್ಯಾಂಕ್ ಉದ್ಯೋಗಿಯೊಬ್ಬ ₹45.23 ಲಕ್ಷ ಹಣಕ್ಕೆ 50 ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚಿಸಿರುವ ಬಗ್ಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ನಿವಾಸಿ ಹಾಗೂ ಚಿಕ್ಕಮಗಳೂರು ನಗರದ ಕಲ್ಯಾಣನಗರದ ವೈ.ಡಿ. ರಮೇಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಖಾಸಗಿ ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಮತ್ತು ಬಣಕಲ್‌ನ ಬ್ರಾಮರಿ ಜ್ಯುವೆಲ್ಲರ್ ವರ್ಕ್ಸ್‌ನ ನಾಗರಾಜ್ ವಿರುದ್ಧ ಆರೋಪ ಕೇಳಿಬಂದಿದೆ.

ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಮೇಶ್ ಅವರಿಗೆ ಶಿವಪ್ರಸಾದ್ ಪರಿಚಯವಾಗಿದ್ದ. 2024ರಲ್ಲಿ ರಮೇಶ್ ಅವರ ಪತ್ನಿ ಪುಷ್ಪ ಅವರಿಗೆ ಸೇರಿದ ಕಡೂರು ಪಟ್ಟಣದ ಮನೆಯನ್ನು ಮಾರಾಟ ಮಾಡಿದ ಹಣವನ್ನು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಶಿವಪ್ರಸಾದ್ ಆಮಿಷವೊಡ್ಡಿದ್ದಾನೆ ಎನ್ನಲಾಗಿದೆ. ಆ ಬೆಳ್ಳಿಯನ್ನು ನಾವೇ ಮಾರಾಟ ಮಾಡಿ, ನಿಮಗೆ ಹಣ ಕೊಡುತ್ತೇವೆ ಎಂದು ಹೇಳಿ ಕಳೆದ ಏಪ್ರಿಲ್ 8 ರಂದು ಎಲ್ಲ 50 ಕೆ.ಜಿ ಬೆಳ್ಳಿಯನ್ನು ತೆಗೆದುಕೊಂಡು ಹೋದವರು ಫೋನ್ ಕೂಡಾ ಎತ್ತದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments