Tuesday, August 11, 2026
Homeಕ್ರೈಮ್ಮೂಡಿಗೆರೆ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಯುವಕ: ಅದೃಷ್ಟವಶಾತ್‌ ಪಾರು!

ಮೂಡಿಗೆರೆ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಯುವಕ: ಅದೃಷ್ಟವಶಾತ್‌ ಪಾರು!

Telegram Group
Join Now

ಚಿಕ್ಕಮಗಳೂರು: ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಯುವಕ ಕಾಲು ಜಾರಿ 30 ಅಡಿ ಪ್ರಪಾತಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ʼನಲ್ಲಿ ನಡೆದಿದೆ.

ಬಣಕಲ್‌ ಸಮೀಪದ ಚಕ್ಕಮಕ್ಕಿ ಗ್ರಾಮದ ಮುಜಾಮಿಲ್‌ (21), ಗಂಭೀರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಚಾರ್ಮಾಡಿ ಘಾಟಿಯ ರಸ್ತೆ ಪಕ್ಕದ ಪ್ರಪಾತ್‌ ಅಂಚಿನಲ್ಲಿ ಮೂರ್ತ ವಿಸರ್ಜನೆ ಮಾಡಲು ಹೋದಾಗ ನಡೆದ ಅಚಾತುರ್ಯವಾಗಿದೆ.

ಆ ತಕ್ಷಣ ಸ್ಥಳೀಯರು, ಸ್ನೇಹಿತರು ಸ್ಥಳಕ್ಕೆ ಧಾವಿಸಿ ಅವನನ್ನು ಮೇಲಕ್ಕೆ ಎತ್ತಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.

ಚಾರ್ಮಾಡಿ ಘಾಟ್ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗವಾಗಿದ್ದು, ಪ್ರವಾಸಿಗರು ಆಗಾಗ ಭೇಟಿ ನೀಡುವ ಸ್ಥಳವಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತು ಪ್ರಪಾತದ ಅಂಚು ಜಾರುವಿಕೆ ಅಪಾಯವಾಗಿದೆ.

ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments