ಚಿಕ್ಕಮಗಳೂರು: ಶೃಂಗೇರಿ ಭಾಗಕ್ಕೆ ಬಹುದಿನದ ಕನಸಾದ ರೈಲ್ವೆ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು ರೈಲ್ವೆಯ ಅನುಷ್ಠಾನಕ್ಕಾಗಿ ಸಕಲ ರೀತಿಯ ಪ್ರಯತ್ನ ಮಾಡುತ್ತಿರುವುದು ನಮಗೆ ಸಂತಸದ ವಿಚಾರ ಎಂದು ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಅವರು ಹೇಳಿದ್ದಾರೆ.

ಜೊತೆಗೆ ಚಿಕ್ಕಮಗಳೂರಿಗೆ ಏಮ್ಸ್ ನ ತರುವ ಪ್ರಯತ್ನ, ಜೊತೆಗೆ ಕೌಶಲ್ಯ ಅಭಿವೃದ್ಧಿ ಯೋಜನೆಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆಯನ್ನು ತಲುಪುವಂತೆ ಹಾಗೂ ನಮ್ಮ ಜಿಲ್ಲೆ ದೇಶದಲ್ಲೇ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವಂತೆ ಮಾಡುತ್ತಿದ್ದಾರೆ ಎಂದರು

ಹಾಗೆ ಶೃಂಗೇರಿ–ಜಯಪುರ–ಬಾಳೆಹೊನ್ನೂರು–ಹ್ಯಾರಂಬಿ–ಆಲ್ದೂರು–ನಂದಿಪುರ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಮನವಿ ಸಲ್ಲಿಸಿ ಶ್ರೀಘ್ರ ಅನುಷ್ಠಾನದ ಪ್ರಯತ್ನದಲ್ಲಿದ್ದಾರೆ ಎಂದು ದೆಹಲಿಯಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮನವಿ ಮಾಡಿದ ಕೇಂದ್ರದ ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಯವರು ಪಬ್ಲಿಕ್ ಇಂಪ್ಯಾಕ್ಟ್‌ಗೆ ತಿಳಿಸಿದರು .
ವರದಿ: ಶಶಿ ಬೆತ್ತದಕೊಳಲು
