Saturday, August 15, 2026
Homeಕ್ರೈಮ್ಚಿಕ್ಕಮಗಳೂರು: ಶ್ರೀಗಂಧದ ಮರದ ತುಂಡುಗಳನ್ನು ಕದಿಯಲು ಯತ್ನ: ಭಯಕ್ಕೆ ಕಳ್ಳರು ಪರಾರಿ!

ಚಿಕ್ಕಮಗಳೂರು: ಶ್ರೀಗಂಧದ ಮರದ ತುಂಡುಗಳನ್ನು ಕದಿಯಲು ಯತ್ನ: ಭಯಕ್ಕೆ ಕಳ್ಳರು ಪರಾರಿ!

Telegram Group
Join Now

ಚಿಕ್ಕಮಗಳೂರು: ಮನೆಯ ಹಿಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ಬುಡದ ಸಮೇತ ಕತ್ತರಿಸಿದ ಕಳ್ಳರು ತೆಗೆದುಕೊಂಡು ಹೋಗಲು ಆಗದೆ ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಬಡಾವಣೆಯ ನರಸಿಂಗರಾವ್ ರಸ್ತೆಯಲ್ಲಿ ನಡೆದಿದೆ.

ಹೌದು .. ನಿವೃತ ಶಿಕ್ಷಕಿ ಉಮಾದೇವಿ ಅವರಿಗೆ ಸೇರಿದ ಬಸವನಹಳ್ಳಿ ಬಡಾವಣೆಯ ನರಸಿಂಗರಾವ್ ರಸ್ತೆಯ ಮನೆಯ ಹಿಂಭಾಗದಲ್ಲಿ ಬೆಳೆಸಿದ ಶ್ರೀಗಂಧದ ಮರವನ್ನು ರಾತ್ರಿ ಸಮಯದಲ್ಲಿ ಕಳ್ಳರು ಶಬ್ದ ರಹಿತ ಕಟಿಂಗ್ ಮಷೀನ್ ಬಳಸಿ ಶ್ರೀಗಂಧದ ಮರವನ್ನ ಕಡಿದು ಸಾಗಿಸಲು ಪ್ರಯತ್ನಿಸಿದ್ದಾರೆ.

ರಾತ್ರಿ  ಎರಡು ಗಂಟೆ ವೇಳೆ ಪಕ್ಕದ ಮನೆಯ ನಿವಾಸಿಗೆ ಎಚ್ಚರವಾಗಿ ವಿದ್ಯುತ್ ದೀಪ ಹಾಕಿ ಏನಿದು ಸೌಂಡ್‌ ಎಂದು ಯಾರು ಎಂದು ಕೂಗಿಕೊಂಡಾಗ ಪರಾರಿಯಾಗಿದ್ದಾರೆ. ಬೆಳಿಗ್ಗೆ ವಿಷಯ ತಿಳಿದ ಶಿಕ್ಷಕಿ ಉಮಾದೇವಿಯವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನಾ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ರೀಗಂಧದ ದಿಂಬಿಗಳನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments