Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮೆಡಿಕಲ್ ಕಾಲೇಜಿನಲ್ಲಿ ಜೇನುಹುಳುಗಳ ಮಾರಣಹೋಮ: ಈ ಕೂಡಲೇ ಕ್ರಮತೆಗೆದುಕೊಳ್ಳಲಿ: ವೀರೇಶ್ ಜಿ

ಚಿಕ್ಕಮಗಳೂರು: ಮೆಡಿಕಲ್ ಕಾಲೇಜಿನಲ್ಲಿ ಜೇನುಹುಳುಗಳ ಮಾರಣಹೋಮ: ಈ ಕೂಡಲೇ ಕ್ರಮತೆಗೆದುಕೊಳ್ಳಲಿ: ವೀರೇಶ್ ಜಿ

ಚಿಕ್ಕಮಗಳೂರು: ಮೆಡಿಕಲ್ ಕಾಲೇಜಿನಲ್ಲಿ 80ಕ್ಕೂ ಹೆಚ್ಚು ಜೇನುಗೂಡುಗಳನ್ನು ನಾಶ ಮಾಡಲಾಗಿದೆ. ಲಕ್ಷಾಂತರ ಜೇನು ಹುಳುಗಳು ಸತ್ತು ಬಿದ್ದಿರುವುದು ಅತ್ಯಂತ ನೋವಿನ ವಿಚಾರ ಎಂದು ವನ್ಯಜೀವಿ ಕಾರ್ಯಕರ್ತ ವೀರೇಶ್ ಜಿ ಅವರು ಹೇಳಿದ್ದಾರೆ.


ನಿಸರ್ಗದಲ್ಲಿ ಜೇನು ಹುಳುಗಳ ಪಾತ್ರ ಅತಿ ಮುಖ್ಯ ಪರಾಗ ಸ್ಪರ್ಶ ಕ್ರಿಯೆಗೆ ತೊಡಗಿಕೊಳ್ಳುವ ಜೇನುಗಳು ಮಾನವನಿಗೆ ಉಪಕಾರಿ, ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ,ಅಲ್ಲಿನ ಮುಖ್ಯಸ್ಥರು ಅವೈಜ್ಞಾನಿಕವಾಗಿ ರಸಾಯನ ಸಿಂಪಡಿಸಿ ಜೇನು ಹುಳುಗಳ ಗೂಡುಗಳನ್ನು ನಾಶ ಮಾಡಿದ್ದಾರೆ.

ಜೇನು ಹುಳುಗಳ ಸ್ಥಳಾಂತರಕ್ಕೆ ವೈಜ್ಞಾನಿಕವಾಗಿ ತೊಂದರೆ ಆಗದಂತ ಮಾರ್ಗ ಅನುಸರಿಸುವುದರ ಬದಲು,ಕೆಲ ಸಿಬ್ಬಂದಿಗಳ ನಿಯೋಜಿಸಿ ರಸಾಯನ ಸಿಂಪಡಿಸಿ ಜೇನು ಸಮುದಾಯವನ್ನು ಕೊಲ್ಲಲಾಗಿದೆ.ಈ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು .

ಇಲ್ಲಿನ ಮೆಡಿಕಲ್ ಕಾಲೇಜು ಮೇಲಾಧಿಕಾರಿಗಳು ಜವಾಬ್ದಾರಿ ಇಲ್ಲದೆ, ನಡೆದುಕೊಂಡು ಸಹಸ್ರಾರು ಜೇನು ಹುಳುಗಳ ಮಾರಣ ಹೋಮಕ್ಕೆ ಕಾರಣವಾಗಿದ್ದಾರೆ .ಕೂಡಲೇ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುವುದು ಪರಿಸರ ಪ್ರಿಯರ ಒತ್ತಾಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!