ಚಿಕ್ಕಮಗಳೂರು: ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಪ್ರಮಾಣದ ಸಾಲ ಮತ್ತು ರಿಫಂಡ್ ನೀಡುವುದಾಗಿ ನಂಬಿಸಿ ಪ್ರೊಸೆಸ್ಸಿಂಗ್ ಚಾರ್ಜಸ್ ರೀತಿಯಲ್ಲಿ 6 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಹೌದು .. ನಗರದ ವ್ಯಕ್ತಿಯೊಬ್ಬರಿಗೆ ಇನ್ಸ್ಟಾಗ್ರಾಂ ಆಪ್ ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿರುವಾಗ ತುಂಬಾ ಕಡಿಮೆ ಬಡ್ಡಿಗೆ ಲೋನ್ ಕೊಡುವ ವಿಡಿಯೋ ಬಂದಿದೆ. ಇದನ್ನು ವೀಕ್ಷಿಸಿದ ವ್ಯಕ್ತಿಗೆ ಸೈಬರ್ ವಂಚಕರು ಕರೆಮಾಡಿ ನೀವು ಲೋನ್ ಬಗ್ಗೆ ವಿಡಿಯೋ ವನ್ನು ವೀಕ್ಷಿಸುತ್ತೀರಿ. ನಾವು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಲೋನ್ ಬೇಕಾದರೆ ನಾವು ಕಡಿಮೆ ಬಡ್ಡಿಗೆ ಲೋನ್ ಮಾಡಿಸಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ.
ಹಾಗೆ 2 ಲೋನ್ ಗಳನ್ನ ಡೌನ್ ಲೋಡ್ ಮಾಡಿಸಿ ಡಾಕ್ಯೂಮೆಂಟ್ ಗಳನ್ನ ಅಪ್ ಲೋಡ್ ಮಾಡಿಸಿಕೊಂಡು ಅದರಿಂದ ಸದರಿ ವ್ಯಕ್ತಿಗೆ 4.5 ಲಕ್ಷರೂ . ಸಾಲವನ್ನು ಮಂಜೂರು ಮಾಡಿ ನಂತರ ಇನ್ನೂ ಹೆಚ್ಚಿನ ಸಾಲ ಬೇಕಾದರೆ 7 ಲಕ್ಷ ರೂ. ಸಾಲ ಮಂಜೂರು ಮಾಡುತ್ತೇವೆ ಎಂದು ನಂಬಿಕೆ ಹುಟ್ಟಿಸಿ ವಿಶ್ವಾಸ ಮೂಡಿಸಿದ್ದಾರೆ.
ಬಳಿಕ ನೀವು ಪಡೆದಿರುವ 4.5 ಲಕ್ಷ ರೂ. ಪ್ರೊಸೆಸ್ಸಿಂಗ್ ಜಾರ್ಜಸ್ ಸೇರಿ ಒಟ್ಟು 6,26,000 ರೂ. ಗಳನ್ನು ನಾವು ಹೇಳಿದ ಅಕೌಂಟ್ ಗೆ ಹಾಕಿದರೆ ನಿಮಗೆ ವಾಪಸ್ 7 ಲಕ್ಷ ರೂ ಜೊತೆ ಈ ಹಣವು ಬರಲಿದೆ ಎಂದಿದ್ದಾರೆ. ಇದನ್ನು ನಂದಿಬ ವ್ಯಕ್ತಿ ಹಣ ಕಳುಹಿಸಿದರೆ ಆಮೇಲೆ ಯಾವ ಹಣವು ಇಲ್ಲ ರೀಫಂಡ್ ಕೂಡ ಇಲ್ಲದೇ ನಂತರ ಮೋಸ ಹೋಗಿದ್ದು ತಿಳಿದು ನಂತರ ಸೈಬರ್ ಕ್ರೈಂ ಠಾಣೆಯಲ್ಲಿಕಂಪ್ಲೇಂಟ್ ಕೊಟ್ಟಿದ್ದಾರೆ.
