Monday, August 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಜಿಲ್ಲೆಯಲ್ಲಿ BSNL ನೆಟ್ವರ್ಕ್‌ ಸಮಸ್ಯೆ ವಿಚಾರ: ಕೇಂದ್ರದಿಂದ 103 ಹೊಸ ಟವರ್ ಮಂಜೂರಾತಿ: ಸಂಸದ...

ಚಿಕ್ಕಮಗಳೂರು: ಜಿಲ್ಲೆಯಲ್ಲಿ BSNL ನೆಟ್ವರ್ಕ್‌ ಸಮಸ್ಯೆ ವಿಚಾರ: ಕೇಂದ್ರದಿಂದ 103 ಹೊಸ ಟವರ್ ಮಂಜೂರಾತಿ: ಸಂಸದ ಕೋಟ

Telegram Group
Join Now

ಚಿಕ್ಕಮಗಳೂರು: BSNL ಟವರ್ ಗಳು 2G ಯಿಂದ 4G ಅಳವಡಿಕೆ ಮಾಡಿದ ಹಿನ್ನೆಲೆಯಲ್ಲಿ ನೆಟ್ವರ್ಕ್ ನ ಸಮಸ್ಯೆ ಎದುರಾಗುತ್ತಿದ್ದು ಜಿಲ್ಲೆಗೆ ಹೆಚ್ಚುವರಿ ಟವರ್ ಗಳ ಅಗತ್ಯವಿದೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಸಚಿವ ಜ್ಯೋತಿರಾಜ್ ಸಿಂಧ್ಯಾ ರವರ ಸಹಕಾರದೊಂದಿಗೆ ಚಿಕ್ಕಮಗಳೂರು ಜಿಲ್ಲೆಗೆ 103 ಟವರ್ ಗಳು ಹೊಸತಾಗಿ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಚಿಕ್ಕಮಗಳೂರು ಜಿಲ್ಲೆಯ BSNL ಮುಖ್ಯ ಕಚೇರಿಯಲ್ಲಿ BSNL ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಇತರ ಖಾಸಗಿ ಮೊಬೈಲ್ ಸಂಸ್ಥೆಗಳಿಗಿಂತ ಉತ್ತಮ ಗುಣಮಟ್ಟದ ಸೇವೆ ನೀಡಿದಾಗ ಮಾತ್ರ BSNL ತನ್ನ ಹಿಂದಿನ ಗೌರವನ್ನು ಉಳಿಸಿಕೊಳ್ಳುತ್ತದೆ ಆದ್ದರಿಂದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮವಹಿಸಿ ದುಡಿದು ನೆಟ್ವರ್ಕ್ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದರು.

ಸಭೆಯಲ್ಲಿ ಶಿವಮೊಗ್ಗ ವಿಭಾಗದ GM ವಿನಯ್ ಕುಮಾರ್ ಸಿನ್ಹಾ, DGM ಬಾಲಾಜಿ, AGM ಗಳಾದ ಗೋಪಾಲ ಕೃಷ್ಣಾ ಭಟ್ ಮತ್ತು ಶ್ರೀಮತಿ ಆಶಿಯಾ ಹಾಗೂ BSNL ನಾಮನಿರ್ದೇಶನ ಸದಸ್ಯರಾದ ಸೋಮಶೇಖರ್, ಶ್ರೀಮತಿ ಆಶಾ ಮೂಡಿಗೆರೆ, ಪುಟ್ಟಸ್ವಾಮಿ ಹಿರೇಮಂಗಳೂರು , ಚಿಮನ, ವಿನೋದ್ ಬೊಗಸೆ ಮತ್ತು ಶಶಿ ಆಲ್ದೂರು ಮತ್ತು ದೀಪಕ್ ದೊಡ್ಡಯ್ಯ ಮುಂತಾದವರು ಉಪಸ್ಥಿತರಿದ್ದರು:

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments