Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಕುಂದುಕೊರತೆಗಳನ್ನ ಆಲಿಸಿದ ಸಿ.ಟಿ.ರವಿ!

ಚಿಕ್ಕಮಗಳೂರು: ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಕುಂದುಕೊರತೆಗಳನ್ನ ಆಲಿಸಿದ ಸಿ.ಟಿ.ರವಿ!

ಚಿಕ್ಕಮಗಳೂರು: ಜಿಲ್ಲೆಯ ಮೆಡಿಕಲ್ ಕಾಲೇಜು ಮತ್ತು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆಗಳಿದ್ದು, ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಹೌದು .. ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ್ದಲ್ಲದೆ, ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮೊನ್ನೆ ದೇವೀರಮ್ಮನವರ ಬೆಟ್ಟ ಹತ್ತುವಾಗ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರು ನಮ್ಮನ್ನು ಭೇಟಿಯಾಗಿದ್ದರು ಆ ವೇಳೆ ಕಾಲೇಜು ಹಾಸ್ಟೆಲ್‌ನಲ್ಲಿ ಸಮಸ್ಯೆ ಇದೆ ಎಂದು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್‌ಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು

ಹಾಸ್ಟೆಲ್‌ನಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ಇದೆ. ಆಗಾಗ ವಿದ್ಯುತ್ ಕಡಿತ ಆಗುತ್ತಿರುತ್ತದೆ. ವೋಲ್ಟೇಜ್ ಸಮಸ್ಯೆ ಇದೆ. ಜನರೇಟರ್ ಆಟೋಮ್ಯಾಟಿಕ್ ಚಾಲನೆ ಆಗುವುದಿಲ್ಲ. ಕೆಲವೊಮ್ಮೆ ಇಡೀ ದಿನ ವಿದ್ಯುತ್ ಇರುವುದಿಲ್ಲ ಇದೆಲ್ಲವೂ ಅಮಾನವೀಯ ಎಂದರಲ್ಲದೆ, ಹೈಸ್ಪೀಡ್ ಇಂಟರ್‌ನೆಟ್ ಸಮಸ್ಯೆ ಇದೆ ಎನ್ನುವ ದೂರುಗಳಿವೆ ಎಂದರು.

ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಾಸ್ಟೆಲ್ ಊಟ-ತಿಂಡಿ ಗುಣಮಟ್ಟ ಮತ್ತು ಅಗತ್ಯದಷ್ಟು ಪೂರೈಕೆಯಲ್ಲಿ ಕೊರತೆ ಇದೆ. ಶುಚಿತ್ವದ ಕೊರತೆ ಇದೆ. ಜೇನು ಹುಳುಗಳ ಕೊರತೆ ಇದೆ. ಕರ್ಟನ್ ರಾಡ್ ಒದಗಿಸಿಲ್ಲ. ಏರ್ ಕಂಡೀಷನ್ ವಿದ್ಯುತ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ದೂರುಗಳಿವೆ ಎಂದು ತಿಳಿಸಿದರು.

ಹಾಗೆ ಯೂರಾಲಜಿ, ಕಾರ್ಡಿಯಾಲಜಿ ಬೋಧನೆಗೆ ಎಂಎಸ್ ಆಗಿರುವ ಸಿಬ್ಬಂದಿ ಬೇಕು ಅದನ್ನು ಒದಗಿಸಬೇಕು. ಹಾಸ್ಟೆಲ್ ಬ್ಲಾಕ್‌ನಲ್ಲಿ ಮಿನಿ ಗ್ರಂಥಾಲಯ ತೆರೆಯಬೇಕು. ಸ್ವಚ್ಛತೆಗೆ ಇನ್ನಷ್ಟು ಗಮನ ಕೊಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳದ್ದಾಗಿದೆ ಎಂದರು. ಎರಡು ಬಾರಿ ವೈದ್ಯಕೀಯ ಶಿಕ್ಷಣ ಸಚಿವರು ಇಲ್ಲಗೆ ಭೇಟಿ ನೀಡಿದರೂ ಸಮಸ್ಯೆಗಳು ಹಾಗೇ ಉಳಿದಿವೆ ಇದರ ಬಗ್ಗೆ ಗಮನಹರಿಸಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!