ಕಾಫಿನಾಡ ದತ್ತಪೀಠ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ದತ್ತಪೀಠದ ಗುಹೆಯೊಳಗೆ ಸುಪ್ರೀಂಕೋರ್ಟ್ ಆದೇಶ ಮೀರಿ ಹೊಸ ಆಚರಣೆ ಮಾಡಿದ್ದಾರೆ ಅಂತಾ vhp ಹಾಗೂ ಭಜರಂಗದಳ ಆರೋಪಿಸಿದೆ.

ಜನವರಿ 23ರಂದು ಗುಹೆಯೊಳಗೆ ಹೊಸದಾಗಿ ಕಲಮೆ ತಯ್ಯಬಾ ಆಚರಣೆ ಮಾಡಿದ್ದಾರೆ. ದತ್ತಪೀಠ ವ್ಯವಸ್ಥಾಪನಾ ಸಮಿತಿ ಇದ್ದಾಗ ಯಾವುದೇ ಹೊಸ ಆಚರಣೆ ನಡೆದಿರಲಿಲ್ಲ. ವ್ಯವಸ್ಥಾಪನ ಸಮಿತಿ ಅವಧಿ ಮುಗಿಯುತ್ತಿದ್ದಂತೆ ಹೊಸ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ. ನಮಗೆ ಗುಹೆ ಮುಂಭಾಗ ಹೋಮ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ, ನಾವು ಪಕ್ಕದ ಶೆಡ್ ನಲ್ಲಿ ಹೋಮ ಮಾಡಿದ್ದೇವೆ. ಈಗ ಗುಹೆ ಒಳಭಾಗದಲ್ಲಿ ಕಲಮೆ ತಯ್ಯಬಾ ಮಾಡಲು ಹೇಗೆ ಅವಕಾಶ ಕೊಟ್ರು ಎಂದು ಹಿಂದೂ ಸಂಘಟನೆಗಳ ಪ್ರಶ್ನೆ ಮಾಡಿವೆ.
ದತ್ತಪೀಠದಲ್ಲಿ ಪೂಜೆ ಮಾಡುವವರು 25 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪೂಜೆ ಮಾಡುವಂತಿಲ್ಲ. ಎಂಡೋಮೆಂಟ್ ಕಮಿಷನರ್ ನ್ಯಾಯಾಲಯದಲ್ಲಿ ದಿ. ಸಯ್ಯದ್ ಪಿರ್ ಮೊಹಮ್ಮದ್ ಶಾಖಾದ್ರಿಯವರೇ ಇದನ್ನ ಹೇಳಿದ್ದಾರೆ. ಆದ್ರೆ, ಈಗ ಹಾಲಿ ಇರುವ 3 ಮುಜಾವರ್ ಗಳಿಗೆ ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳಿದ್ದು 35 ವರ್ಷಗಳಿಂದ ಮುಜಾವರ್ ಗಳಾಗಿದ್ದಾರೆ.
ಇನ್ನೊಂದೆಡೆ ಪ್ರಸ್ತುತ ದತ್ತಪೀಠದಲ್ಲಿ ಪೂಜೆ ಮಾಡುತ್ತಿರುವ ಹಿಂದೂ ಯುವಕರು ಅವಿವಾಹಿತರೇ ಆಗಿದ್ದಾರೆ. ಮುಜಾವರ್ ಗಳು ಅವಿವಾಹಿತರಾಗಿರಬೇಕು, 25 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಪೂಜೆ ಮಾಡುವಂತಿಲ್ಲ. ಸಯ್ಯದ್ ಪಿರ್ ಮಹಮ್ಮದ್ ಶಾಖಾದ್ರಿ ಹೇಳಿಕೆ ಪ್ರಕಾರ ಅವರ ಕೂಡಲೇ ಬದಲಾಯಿಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹ ಮಾಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ವಿ.ಎಚ್.ಪಿ. ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಮನವಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ
