ಚಿಕ್ಕಮಗಳೂರು : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿಯ ಮುಂದಿನ ಐದು ವರ್ಷಗಳ ಅವಧಿಗೆ ನಡೆಯುವ ಚುನಾವಣೆಯ ಕಣ ಅಂತಿಮಗೊಂಡಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಕಣದಲ್ಲಿ ಅಂತಿಮ ಕಣದಲ್ಲಿ 10 ಸ್ಪರ್ಧಿಗಳು ಅಖಾಡದಲ್ಲಿ ಉಳಿದಿದ್ದಾರೆ.
ರಿಟರ್ನಿಂಗ್ ಅಧಿಕಾರಿಗಳು ಪ್ರಕಟಿಸಿರುವ ಅಧಿಕೃತ ಪಟ್ಟಿಯಂತೆ, ಒಟ್ಟು ಎಂಟು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಸ್ಥಾನಗಳಿಗೆ ಜನವರಿ 17ರಂದು ಮತದಾನ ನಡೆಯಲಿದೆ. ಜಿಲ್ಲೆಯ ಸಹಕಾರ ವಲಯದಲ್ಲಿ ಈ ಚುನಾವಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಕಡೂರು ತಾಲ್ಲೂಕಿನಿಂದ ಎಸ್.ವಿ. ಬಸವರಾಜಪ್ಪ ಮತ್ತು ಬೆಳ್ಳಿ ಪ್ರಕಾಶ್, ತರೀಕೆರೆ ತಾಲ್ಲೂಕಿನಿಂದ ಕೆ.ಆರ್. ಆನಂದಪ್ಪ ಮತ್ತು ಡಿ.ಎಸ್. ಸುರೇಶ್, ಮೂಡಿಗೆರೆ ತಾಲ್ಲೂಕಿನಿಂದ ಎಚ್.ಬಿ. ಶಿವಣ್ಣ, ಶೃಂಗೇರಿ ಕ್ಷೇತ್ರದಿಂದ ಎಚ್.ಕೆ. ದಿನೇಶ್ ಹೆಗ್ಡೆ, ಎನ್.ಆರ್. ಪುರ ತಾಲ್ಲೂಕಿನಿಂದ ಜಯಪಾಲ ಕೆ.ಸಿ. ಅವರು ಅವಿರೋಧವಾಗಿ ಆಯ್ಕೆಯಾದವರು. ಇದರೊಂದಿಗೆ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಎಸ್.ಡಿ. ಸೋನಲ್ ಅವರು ಸಹ ಯಾವುದೇ ಸ್ಪರ್ಧೆಯಿಲ್ಲದೆ ಸ್ಥಾನ ಪಡೆದಿದ್ದಾರೆ.
ಅವಿರೋಧ ಆಯ್ಕೆಗಳ ನಂತರ ಉಳಿದ ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಚಿಕ್ಕಮಗಳೂರು ತಾಲ್ಲೂಕಿನ ಎರಡು ಸ್ಥಾನಗಳಿಗಾಗಿ ಎಂ.ಎಸ್. ನಿರಂಜನ್, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮತ್ತು ಮಾಜಿ ಸಚಿವ ಸಿ.ಟಿ. ರವಿ ಕಣದಲ್ಲಿದ್ದಾರೆ
ಉಳಿದಂತೆ ವಿರೂಪಾಕ್ಷಪ್ಪ, ಎಚ್. ಬಿ .ಶಿವಣ್ಣ , ದಿನೇಶ್ ಹೆಗಡೆ, ಜೈಪಾಲ್ ಕೆ.ಸಿ, ಸೋನಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕಣದಲ್ಲಿ ಎಂ.ಪಿ .ಕುಮಾರಸ್ವಾಮಿ, ಟಿ.ಎಲ್ .ರಮೇಶ್, ಎಂ.ಎಸ್ .ನಿರಂಜನ್, ಪ್ರಜ್ವಲ್ ಯು.ಎಸ್., ಕೆಎಸ್ ರವೀಂದ್ರ ,ಬಿಎಸ್ ಸತೀಶ್, ಎಚ್. ಕೆ. ದಿನೇಶ್ ಉಳಿದಿದ್ದಾರೆ
ಚುನಾವಣಾ ವೇಳಾಪಟ್ಟಿಯಂತೆ ಜನವರಿ 17ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
