ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ.ನಾಮ ಪತ್ರ ಸಲ್ಲಿಸಲು ಜನವರಿ ಒಂಬತ್ತು ಕೊನೆಯ ದಿನ ಜನವರಿ 17 ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಿಂತ್ರಾಣಗೊಂಡಿದೆ ಎಂದು ತಿಳಿದರು ಕೂಡ ಸರ್ಕಾರ ಇರುವುದರಿಂದ ಏನು ಬೇಕಾದರೂ ಆಗಬಹುದು.
ಟಿ.ಎ.ಪಿ.ಸಿ.ಎಂ.ಎಸ್.ನಿಂದ ನಿರ್ದೇಶಕರಾಗಿ ಬರಲು ಕಡೂರು ಶಾಸಕ ಆನಂದ್ ತಯಾರಿ ನಡೆಸಿದ್ದಾರೆ.ಇನ್ನುಳಿದಂತೆ ಜೀರೋ ಆಗಿದ್ದಾರೆ. ಆದರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಿಜೆಪಿಯಲ್ಲೂ ಒಡೆದ ಹಾಲಿನಂತಾಗಿದೆ.ತರೀಕೆರೆ, ಮೂಡಿಗೆರೆ, ಕಡೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿದೆ. ಜನತಾದಳದ ಜೊತೆಗೆ ಹೊಂದಾಣಿಕೆ ಚಿಕ್ಕಮಗಳೂರು ಮತ್ತು ಕೊಪ್ಪ,ಶೃಂಗೇರಿ.ಎನ್.ಆರ್.ಪುರದಲ್ಲಿ ತಂತಿ ಮೇಲೆ ನಡೆಯ ಬೇಕಾಗಿದೆ.
ಹಾಲಿ ಸದಸ್ಯ ರಮೇಶ್ ಜೊತೆಗೆ ಹದಿಮೂರು ಜನ ಅರ್ಜಿ ಹಾಕಿರುವುದು ತಲೆನೋವು ತಂದಿದೆ.ಇನ್ನೂ ಹಾಲು ಉತ್ಪಾದಕ ಕ್ಷೇತ್ರದಲ್ಲಿ ಸೊನಾಲ್ ಮತ್ತು ಜಗದೀಶ್ ಮಧ್ಯೆ ಪೈಪೋಟಿ ಇರುವುದರಿಂದ ಒಡೆದ ಹಾಲಿನಂತೆ ಆಗಿರುವುದು ಬಿಜೆಪಿ ಮತ್ತು ದಳಕ್ಕೆ ತಲೆ ನೋವಾಗಿದೆ.
ಚಿಕ್ಕಮಗಳೂರು ಕ್ಷೇತ್ರದ ನಿರಂಜನ ಅವರಿಗೆ ಅವಕಾಶ ಮಾಡಿಕೊಡದಿದ್ದರೆ ಸಿ.ಟಿ.ರವಿಗೆ ತೊಡಕು ಖಚಿತ ಎನ್ನಲಾಗಿದೆ. ಹೀಗಾಗಿ ಬೋಜೇಗೌಡರ ಹುಕುಂಗಾಗಿ ಕಾಯುತ್ತಿದ್ದಾರೆ.ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಅಂತಿಮವಾಗಿ ನಿರ್ಧಾರಕ್ಕೆ ಬರುಲಾಗಿಲ್ಲಾ ಎಂದರೆ ಎಲ್ಲವೂ ಸರಿಯಿಲ್ಲ ಎಂದು ಹಳ್ಳಿ ಗಮಾರರಿಗೂ ಆರ್ಥವಾಗುತ್ತದೆ.ರಮೇಶ್, ನಿರಂಜನ, ಸತೀಶ್ ,ಜಗದೀಶ್ ,ಸೊನಾಲ್ ಭವಿಷ್ಯ ಬೋಜೇಗೌಡರ ತೀರ್ಮಾನದ ಮೇಲೆ ನಿಂತಿದೆ.
