Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತರ ದಿಢೀರ್‌ ಭೇಟಿ!

ಚಿಕ್ಕಮಗಳೂರು: ಬಿಸಿಎಂ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತರ ದಿಢೀರ್‌ ಭೇಟಿ!

ಚಿಕ್ಕಮಗಳೂರು: ನಗರದ ನರಿಗುಡ್ಡಳ್ಳಿ ಸರ್ಕಲ್‌ನಲ್ಲಿರುವ ಬಿಸಿಎಂ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತ ಫಣೀಂದ್ರ ರವರೊಂದಿಗೆ ಸಿಬ್ಬಂದಿಗಳು ರಾತ್ರಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೊಠಡಿಗಳಲ್ಲಿ ಕರೆದುಕೊಂಡು ಹೋಗಿ ಹಾಸ್ಟೆಲ್‌ನ ವ್ಯವಸ್ಥೆಯ ಬಗ್ಗೆ ಗೌಪ್ಯವಾಗಿ ವಿಚಾರಣೆ ನಡೆಸಿದರು. ವಿದ್ಯಾರ್ಥಿನಿಯರು ಸಕಾರಾತ್ಮಕವಾಗಿ ಲೋಕಾಯುಕ್ತರೊಂದಿಗೆ ಸಂವಾದ ನಡೆಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಮೂಲಭೂತ ಸೌಕರ್ಯಗಳ ಬಗ್ಗೆ ಸಾಮೂಹಿಕ ಅಭಿಪ್ರಾಯ ಸಂಗ್ರಹಿಸಿದರು.

ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿ ನೀಡುತ್ತಿರುವ ಊಟ,ತಿಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಬಗ್ಗೆ ಯಾವುದೇ ಕೊರತೆ ಇಲ್ಲ ಆದರೆ ಮಳೆಗಾಲದಲ್ಲಿ ಬಿಸಿನೀರು ದೊರೆಯದಿರುವ ಬಗ್ಗೆ ಹೇಳಿಕೊಂಡರು. ವಾರ್ಢನ್ ರವರುಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹೇಳಿದರು.

ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ್ಲು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಆಹಾರ,ಸಾಮಗ್ರಿಗಳ ಉಗ್ರಾಣ ಕೊಠಡಿಗಳು ಶೌಚಾಲಯಗಳು ಗಳನ್ನು ಪರಿಶೀಲನೆ ನಡೆಸಿದ ಲೋಕಾಯುಕ್ತರು ಉಗ್ರಾಣಗಳಲ್ಲಿ ಕೊಳೆಯುವ ವಸ್ತುಗಳನ್ನು ಸ್ವೀಕರಿಸದೆ ಅಂದಿನ ದಿನಕ್ಕೆ ಅಗತ್ಯವಿರುವ ಹಣ್ಣು ತರಕಾರಿಗಳನ್ನು ಅಂದೆ ಖರೀದಿಸಿ ಮಕ್ಕಳಿಗೆ ಆಹಾರ ತಯಾರಿಸಿ ನೀಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಬಿಸಿಎಂ ಅಧಿಕಾರಿ   ಸತೀಶ್‌ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!