Wednesday, March 25, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ರೈತರ ಆತ್ಮಹತ್ಯೆ ಕರ್ನಾಟಕ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ: ಸಿ.ಟಿ.ರವಿ!

ಚಿಕ್ಕಮಗಳೂರು: ರೈತರ ಆತ್ಮಹತ್ಯೆ ಕರ್ನಾಟಕ ರಾಷ್ಟ್ರದಲ್ಲೇ ಎರಡನೇ ಸ್ಥಾನದಲ್ಲಿದೆ: ಸಿ.ಟಿ.ರವಿ!

ಚಿಕ್ಕಮಗಳೂರು: ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲೇ ಎರಡನೇ ಸ್ಥಾನದ ಲ್ಲಿದೆ. ರಾಜ್ಯದಲ್ಲೇ ಹಾವೇರಿ ಮೊದಲ ಸ್ಥಾನ ಪಡೆದಿದೆ. ಇದಕ್ಕೆ ಮೂಲ ಕಾರಣವೇನು, ರೈತರು ಬದುಕುವ ಭರವಸೆ ಕಳೆದುಕೊಂಡು ಆತಂಕ ಸ್ಥಿತಿಯಲ್ಲಿರುವುದನ್ನು ಪತಿಯೊಬ್ಬರು ಅವಲೋಕಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ತಾಲ್ಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಕ್ಯಾ ಹೋಬಳಿ ಘಟಕದ ಉದ್ದೇಬೋರನಹಳ್ಳಿ ಶಾಖೆಯಿಂದ ಸೋಮವಾರ ಆಯೋಜಿಸಿದ್ಧ ರೈತ ದಿನಾಚರಣೆ ಕಾರ್ಯಕ್ರಮವ ನ್ನು ಉದ್ಘಾಟಿಸಿ ಅವರು ಮಾತನಾಡಿ ದೇಶದ ವಿಜ್ಞಾನಿಗಳು ರೈತರ ಇಳುವರಿ ಹೆಚ್ಚಳಗೊಳಿಸಲು ಸಾಕಷ್ಟು ಪ್ರಯೋಗ ನಡೆಸಿದರು. ಹೊಸ ಆವಿಷ್ಕಾರಗಳಿಂದ ಬೀಜಗಳನ್ನು ಉತ್ಪಾದಿಸಿ ಯಶಸ್ವಿಗೊಂಡರು. ಆದರೆ ರೈತರನ್ನು ಸ್ವಾವಲಂಬಿ ಮಾಡುವ ಪ್ರಯೋಗಗಳು ವಿಜ್ಞಾನಿಗಳಿಂದ ನಡೆಯಲಿಲ್ಲ. ಈ ಹೊರತಾಗಿ ಸ್ವಾವಲಂಬಿ ರೈತರನ್ನು ಪರಾವಲಂಬಿಗಳಾಗಿ ಮಾಡಲಾಯಿತು ಎಂದರು.

ಇಂದು ಪ್ರತಿನಿತ್ಯದ ಆಹಾರ ಸೇವನೆ ಜೊತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವಷ್ಟು ಮಾನವ ಪರಾ ವಲಂಬಿ ಸ್ಥಿತಿಗೆ ತಲುಪಿದ್ದೇವೆ. ನಮ್ಮ ಹಿರಿಯರು ಸಹಜವಾಗಿ ಪ್ರಕೃತಿಯೊಂದಿಗೆ ಜೋಡಿಸಿಕೊಂಡು ಬಂದಿ ದ್ದ ಕೃಷಿ, ಜೀವನ ಹಾಗೂ ಆಹಾರ ಪದ್ಧತಿಯಿಂದ ಹೊರಬಂದಿದ್ದಾರೆ. ಇಂದು ಪ್ರತಿ ಬೆಳೆಗಳಿಗೂ ಔಷಧಿ ಸಿಂಪಡಿಸಿ, ರಾಸಾಯನಿಕ ಗೊಬ್ಬರ ಬಳಸುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಉಪಾಧ್ಯಕ್ಷ ಕುಮಾರಸ್ವಾ ಮಿ, ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ, ಲಕ್ಕುಮನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ರೈತ ಸಂಘ ದ ಖಜಾಂಚಿ ಸೋಮಣ್ಣ, ಕಾರ್ಯದರ್ಶಿ ಬಸವಣ್ಣ, ರೈತ ಸಂಘದ ಕಾರ್ಯದರ್ಶಿ ಪ್ರಕಾಶ್, ಸಂಚಾಲಕ ರವಿಕುಮಾರ್, ಸಿಪಿಐ ಮುಖಂಡ ಅಮ್ಜದ್, ಜಂಟಿ ಕೃಷಿ ಇಲಾಖೆ ಅಧಿಕಾರಿ ತಿರುಮಲ್ಲೇಶ್, ಮುಖಂಡರು ಗಳಾದ ಕಲ್ಲೇಗೌಡ, ಮುರಳಿ, ಮನುಕುಮಾರ್, ಆನಂದ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!