Wednesday, August 12, 2026
Homeಕ್ರೈಮ್ಚಿಕ್ಕಮಗಳೂರು: ಆಸ್ಪತ್ರೆ ಮುಂಭಾಗದಲ್ಲಿ ಧಗಧಗನೆ ಉರಿದ ಮಾರುತಿ 800 ಕಾರು!

ಚಿಕ್ಕಮಗಳೂರು: ಆಸ್ಪತ್ರೆ ಮುಂಭಾಗದಲ್ಲಿ ಧಗಧಗನೆ ಉರಿದ ಮಾರುತಿ 800 ಕಾರು!

Telegram Group
Join Now

ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿ ಕೊಂಡಿದ್ದು, ಸ್ಥಳೀಯರು ಬೆಂಕಿಯನ್ನು ನಂದಿಸಿ ಬಾರೀ ಅನಾಹುತವನ್ನು ತಪ್ಪಿಸಿದರು.

ಕಾರಿನಲ್ಲಿನ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿದ್ದವರು ಕಾರಿನಲ್ಲಿ ಹತ್ತಿಕೊಂಡ ಬೆಂಕಿಯನ್ನು ನಂದಿಸಲು ಮುಂದಾಗದೆ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಆಸ್ಪತ್ರೆಯ ಸಿಬ್ಬಂದಿಗಳು ಸ್ಥಳದಲ್ಲೇ ನಿಂತು ನೋಡುತ್ತಿದ್ದರು ಹೊರತು ಬೆಂಕಿ ನಂದಿಸಲು ಮುಂದಾಗ ಲಿಲ್ಲ.

ಈ ಸಂಧರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಅಡ್ವೆಂಚರ್‌ ಕ್ಲಬ್‌ನ ರೂಬೆನ್‌ ಮೊಸಸ್‌ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದ ಆಕ್ಸಿಜನ್‌ ಸಿಲಿಂಡರ್‌ ಮೂಲಕ ಬೆಂಕಿ ನಂದಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಆಗ ಬಕೆಟ್‌ಗಳಲ್ಲಿ ನೀರು ಹಾಯಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರಿಗೆ ಹತ್ತಿಕೊಂಡಿದ್ದ ಪರ‍್ಣ ಪ್ರಮಾಣದ ಬೆಂಕಿಯನ್ನು ನಂದಿಸಿದರು.

ಒಟ್ಟಿನಲ್ಲಿ ರೂಬೆನ್ ಮೊಸಸ್ ಅವರ ಸಮಯ ಪ್ರಜ್ಜೆಯಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿ, ಅಕ್ಕಪಕ್ಕದವರು ನಿಟ್ಟುಸಿರು ಬಿಡುವಂತಾಯ್ತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments