Saturday, February 28, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ರೈತರ ನಡಿಗೆ ಅರಣ್ಯ ಇಲಾಖೆ ಕಡೆಗೆ ಪ್ರತಿಭಟನೆ

ಚಿಕ್ಕಮಗಳೂರು: ರೈತರ ನಡಿಗೆ ಅರಣ್ಯ ಇಲಾಖೆ ಕಡೆಗೆ ಪ್ರತಿಭಟನೆ

ರೈತರಿಗೆ ಕಂದಾಯ ಮತ್ತು ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ ರೈತರ ಜನ ಜೀವನ ರಕ್ಷಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಮಾರ್ಚ್ 18ರಂದು ರೈತರ ನಡಿಗೆ ಅರಣ್ಯ ಇಲಾಖೆ ಕಡೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷರಾದ ವಿಜಯ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಭೂ ಮಂಜೂರಾತಿಗೆ ನಗರಸಭೆ ವ್ಯಾಪ್ತಿಯಿಂದ ಭೂ ಮಾರ್ಗವಾಗಿ ಅಂತರವನ್ನು ಪರಿಗಣಿಸಬೇಕು, ಫಾರಂ 50 53 ಹಾಗೂ ಇತರೆ ದರಖಾಸ್ತಿನಲ್ಲಿ ಮಂಜೂರು ಮಾಡಲಾಗಿರುವ ಭೂಮಿಗಳಿಗೆ ನಗರಸಭೆ ವ್ಯಾಪ್ತಿಯ ಅಂತರದ ನೆಪ ಹೇಳದೆ ಯಥಾ ಸ್ಥಿತಿಯಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಫಾರಂ 57 ಅನ್ನು ನಮೂನೆ 53ಕ್ಕೆ ನಿಯಮ ಮಾರ್ಪಾಡು ಮಾಡಿಕೊಂಡು ಅರ್ಜಿ ಸಲ್ಲಿಸುವವರಿಗೆ ಹಕ್ಕುಪತ್ರ ನೀಡಬೇಕು, ಸೆಕ್ಷನ್ 4(1) ಅಧಿಸೂಚನೆಯನ್ನು ಅಂತಿಮಗೊಳಿಸುವ ಅಧಿಕಾರ ಹೊಂದಿರುವ ಎಫ್ ಎಸ್ ಓ ರವರ ವಿವೇಚನೆಗೆ ಅರಣ್ಯ ಇಲಾಖೆ ಮಧ್ಯ ಪ್ರವೇಶಿಸಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಕೆ ರಘು, ಕುಮಾರಸ್ವಾಮಿ, ಈಶ್ವರ್, ಗುಣಶೇಖರ್, ಚೌಡೇಗೌಡ, ಮಂಜು, ಧರ್ಮೇಶ್, ಶಾಂತಕುಮಾರ್, ದಕ್ಷಿಣ ಮೂರ್ತಿ, ತೇಜಸ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!