ಚಿಕ್ಕಮಗಳೂರು: ಜಿಲ್ಲಾ ಬೆಳೆಗಾರರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಸ್ಥಾಪಕ ಅಧ್ಯಕ್ಷರಾಗಿ ಕೆ.ಯು ರತೀಶ್ ಕುಮಾರ್ ಮತ್ತು ಪ್ರದಾನ ಕಾರ್ಯದರ್ಶಿಯಾಗಿ ಕೆರೆಮಕ್ಕಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಿದ್ದು, ಉಪಾಧ್ಯಕ್ಷರಾಗಿ ಮೂಡಿಗೆರೆಯ ಬಿ. ಆರ್. ಬಾಲಕೃಷ್ಣ, ಖಜಾಂಚಿಯಾಗಿ ಗೋಕುಲ್ ಸಾರಗೋಡು,ಸಹಕಾರ್ಯದರ್ಶಿಯಾಗಿ ಕೆ. ವಿ ಮಂಜುನಾಥ್ ರವರನ್ನು ಆಯ್ಕೆಮಾಡಲಾಯಿತು.

ಜಿಲ್ಲೆಯ ಅಡಿಯಲ್ಲಿ ಬರುವ ತಾಲ್ಲೂಕು ಮತ್ತು ಹೋಬಳಿ ಸಂಘಟನೆಗಳಿಂದ ಆಯ್ಕೆ ಮಾಡಿ ಕಳುಹಿಸಿರುವ 30 ಮಂದಿ ನಿರ್ದೇಶಕರುಗಳು ನೇಮಕವಾಗಿದ್ದಾರೆ. ಹಾಸನ ಮತ್ತು ಕೊಡಗಿನಲ್ಲಿ ಜಿಲ್ಲಾ ಬೆಳೆಗಾರರ ಸಂಘಗಳು ಅಸ್ತಿತ್ವದಲ್ಲಿ ಇದ್ದು ಇದೀಗ ಚಿಕ್ಕಮಗಳೂರಿನಲ್ಲಿ ಸಂಘ ಸ್ಥಾಪನೆಯಗಿರುವುದು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಬಲ ಬಂದಂತಾಗಿದೆ.
