ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಚಿರತೆ ಹಾವಳಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಬಾಲಕಿಯ ಹೊತ್ತೊಯ್ದು ಚಿರತೆ ಬಲಿ ಪಡೆದ ಪ್ರಕರಣ ಮಾಸುವ ಮುನ್ನವೇ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ದೋರನಾಳು ಭೈರಾಪುರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಈ ವೇಳೆ ಹೆದರದೇ ಬಾಲಕ ಚಿರತೆ ಜೊತೆ ಸೆಣಸಾಡಿ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.
11 ವರ್ಷದ ಬಾಲಕ ಹೃದಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.ಮನೆಯ ಬಳಿ ನಿಂತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ್ದು, ಗಾಯಾಳು ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಸಿಟ್ಟಿಗೆದ್ದ ಚಿರತೆ ಆ ಬಳಿಕ ಕರುವಿನ ಮೇಲೂ ದಾಳಿ ನಡೆಸಿದೆ. ಕೊನೆಗೂ ಕರುವನ್ನ ಕೂಡ ಚಿರತೆ ಬಾಯಿಂದ ರಕ್ಷಿಸುವಲ್ಲಿ ಬಾಲಕ ಯಶಸ್ವಿಯಾಗಿದ್ದಾನೆ. ಬಾಲಕನ ಶೌರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿದ್ದಾರೆ.
ವಾರದ ಹಿಂದಷ್ಟೇ ಬೀರೂರು ಸಮೀಪದ ನವಿಲೇಕಲ್ಲು ಗುಡ್ಡ ಗ್ರಾಮದಲ್ಲಿ ಚಿರತೆ ದಾಳಿಗೆ 5 ವರ್ಷದ ಮಗು ಬಲಿಯಾಗಿತ್ತು. ಮನೆಯ ಹಿಂದೆ ನಿಂತಿದ್ದ ಬಾಲಕಿಯನ್ನು ತಂದೆಯ ಮುಂದೆಯೇ ಚಿರತೆ ಹೊತ್ತೊಯ್ದಿತ್ತು. ಘಟನೆಯಲ್ಲಿ ಕೂಲಿ ಕಾರ್ಮಿಕ ಬಸವರಾಜ ಎಂಬುವರ ಪುತ್ರಿ ಸಾನ್ವಿ (5) ಮೃತಪಟ್ಟಿದ್ದರು
