Friday, March 27, 2026
Homeಕ್ರೈಮ್ಚಿಕ್ಕಮಗಳೂರು: ಕಡೂರು ತಾಲೂಕಿನ ಸುತ್ತಮುತ್ತ ಚಿರತೆ ಕಾಟ: ಗ್ರಾಮಸ್ಥರಲ್ಲಿ ಆತಂಕ!

ಚಿಕ್ಕಮಗಳೂರು: ಕಡೂರು ತಾಲೂಕಿನ ಸುತ್ತಮುತ್ತ ಚಿರತೆ ಕಾಟ: ಗ್ರಾಮಸ್ಥರಲ್ಲಿ ಆತಂಕ!

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಿದ್ದು ಜನ, ಜಾನುವಾರುಗಳು ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಚೌಳಹಿರಿಯೂರು ಸೇರಿದಂತೆ ಸುತ್ತಮುತ್ತ ಇ ತಿಮ್ಮಾಪುರ, ಕುರುಬರಹಳ್ಳಿ, ತಾಂಡ್ಯ, ಮಂಜುನಾಥಪುರ ಮತ್ತಿತರ ಕಡೆ ಗ್ರಾಮದ ಹೊರವಲಯದ ಮನೆಗಳು, ತೋಟಗಳ ಆಸುಪಾಸಿನಲ್ಲಿ ನಿತ್ಯ ಚಿರತೆ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಗ್ರಾಮಸ್ಥರಲ್ಲಿ ಚಿಂತೆ ಮೂಡಿಸಿದೆ.

ಜತೆಗೆ ಗ್ರಾಮದ ಹೊರವಲಯದ ತೋಟದ ಮನೆಯ ಸಿಸಿಟಿವಿಯಲ್ಲಿ ಚಿರತೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ. ಕುಕ್ಕಸಮುದ್ರ ಕಾವಲು, ಗಂಗನ ಹಳ್ಳಿ ಕಾವಲು, ತೆಮ್ಮೆಹಳ್ಳಿ ಕಾವಲು, ಜಮ್ಮಾಪುರ ಕಾವಲು, ವೇದಾನದಿ ದಂಡೆ, ಬನ್ನಿಹಟ್ಟಿ ಕಾವಲು ಮೊದಲಾದ ವಲಯಗಳಲ್ಲಿ ಎರಡು ಚಿರತೆಗಳು ಅಡ್ಡಾಡುತ್ತಿವೆ.

ಸ್ವಲ್ಪ ಸೂಕ್ಷ್ಮ ತಿಳಿದರೂ ಅಥವಾ ಗೊಂದಲ ಉಂಟಾದರೂ ಅವು ತಪ್ಪಿಸಿಕೊಳ್ಳುತ್ತವೆ. ಈ ಬಗ್ಗೆ ಸಿಬ್ಬಂದಿಯನ್ನು ಕಳಿಸಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.

ವಲಯ ಅರಣ್ಯಾಧಿಕಾರಿ ಎಂ.ಆರ್.ಹರೀಶ್, ‘ಯಗಟಿ-ಚೌಳಹಿರಿಯೂರು ಭಾಗದಲ್ಲಿ ಈಗಾಗಲೇ ಬೋನು ಇರಿಸಲಾಗಿದೆ. ಆದರೆ ಈ ಪ್ರಾಣಿಗಳು ಆಹಾರ ಅರಸಿ ಒಂದೆಡೆಯಿಂದ ಮತ್ತೊಂದು ಕಡೆ ಸ್ಥಳಾಂತರವಾಗುತ್ತಲೇ ಇರುತ್ತವೆ. ಚೌಳಹಿರಿಯೂರು ಭಾಗದಲ್ಲಿ ಸಮಸ್ಯೆ ಕಂಡು ಬಂದಿರುವ ಕಡೆ ಬೋನು ಇರಿಸಿ ನಾಯಿ ಕಟ್ಟಿ ಹಾಕಿ ಸೆರೆ ಹಿಡಿಯಲು ಯತ್ನಿಸಲಾಗುವುದು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!