ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ರಂಗಣ್ಣನವರ ಛತ್ರದಲ್ಲಿ ಏರ್ಪಡಿಸಿದ್ದ ದಸರಾ ಬೊಂಬೆಗಳ ಸಾಮೂಹಿಕ ಬೃಹತ್ ಪ್ರದರ್ಶನ.
ಶರನ್ನವರಾತ್ರಿಯಲ್ಲಿ ಮನೆ ಮನೆಯಲ್ಲಿ ಬೊಂಬೆಗಳು ಪ್ರದರ್ಶನ ಸರ್ವೆ ಸಾಮಾನ್ಯ. ಆದರೆ, ಈ ಬಾರಿ ನಗರದ ರಂಗಣ್ಣನವರ ಛತ್ರದಲ್ಲಿ ಸಾಮೂಹಿಕವಾಗಿ ಬೊಂಬೆಗಳನ್ನು ಜೋಡಿಸುವ ಮೂಲಕ ಸಾಂಸ್ಕೃತಿಕ ಪರಂಪರೆ ಉಳಿಸುವ ಪ್ರಯತ್ನ ನಡೆದಿದೆ.
ನಗರದ ಪ್ರಸಿದ್ದ ಅಂಜನಾದ್ರಿ ಬೊಂಬೆಮನೆ. ಸಿರಿ ಬೊಂಬೆಮನೆ, ಅಂಡಾಳ್ ಬೊಂಬೆಮನೆ ಹಾಗೂ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಬೃಹತ್ ಬೊಂಬೆ ಪ್ರದರ್ಶನ ಏರ್ಪಡಿಸಿಲಾಗಿದೆ.
ಪ್ರದರ್ಶನದಲ್ಲಿ ಏನುಂಟು, ಏನಿಲ್ಲ ಎಂಬುವ ಗೋಜಿಗೆ ಹೋಗುವಂತಿಲ್ಲ, ಪುರಾಣ, ಇತಿಹಾಸದಿಂದ ಹಿಡಿದು ಇತ್ತೀಚಿನ ಬಾಹ್ಯಕಾಶ ಸಾಧನೆವರೆಗಿನ ಗೊಂಬೆಗಳು ಕೂಡ ಇಲ್ಲಿ ಸ್ಥಾನ ಪಡೆದಿದ್ದು, ಬೃಹತ್ ಪ್ರದರ್ಶನವನ್ನು ವೀಕ್ಷಿಸಲು ಕನಿಷ್ಟ 1 ಗಂಟೆ ಸಮಯವಾದರೂ ಬೇಕಾಗಬಹುದು.
ಹಿಂದೆ ಸಂಪ್ರದಾಯಸ್ಥ ಮನೆಗಳಲ್ಲಿ ದಸರಾ ಬೊಂಬೆಗಳನ್ನು ಜೋಡಿಸಿ ಪೂಜಿಸುವ ಸಂಸ್ಕೃತಿ ಇತ್ತು. ಇತ್ತೀಚೆಗೆ ಅದು ಕೆಲವರ ಮನೆಗೆ ಸೀಮಿತವಾಗಿದೆ. ದಸರಾ ಬೊಂಬೆ ಸಂಸ್ಕೃತಿ ಯನ್ನು ಪುನರುಜ್ಜಿವನಗೊಳಿಸುವ ಉದ್ದೇಶದಿಂದ ಇನ್ನುಂದೆ ಪ್ರತಿವ? ಬೃಹತ್ ಬೊಂಬೆ ಪ್ರದರ್ಶನ ಏರ್ಪಡಿಸಲಾಗುವುದು.
ಆಧುನಿಕ ಭರಾಟೆಗೆ ಸಿಲುಕಿ ನಾಡಿನ ಸಂಸ್ಕೃತಿ, ಸಂಸ್ಕಾರ, ಪರಂಪರೆ ದೂರ ಸರಿಯುತ್ತಿರುವ ಈ ದಿನಮಾನದಲ್ಲಿ ಅವುಗಳನ್ನು ಪುನರುಜ್ಜಿವನಗೊಳಿಸುವ ಸದುದ್ದೇಶದಿಂದ ಅಂಜನಾದ್ರಿ ಬೊಂಬೆಮನೆಯ ನಾಗಶ್ರೀ ಮತ್ತು ಕಿರಣ್, ಸಿರಿ ಬೊಂಬೆಮನೆಯ ಡಾ. ಸೌಮ್ಯ, ಲಕ್ಷ್ಮಿ ನಟರಾಜ್, ಅಂಡಾಳ್ ಮನೆಯವರ ಜತೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಪದಾಧಿಕಾರಿಗಳು ಕೈಜೋಡಿಸಿದ್ದರ ಫಲವಾಗಿ ನಗರದಲ್ಲಿ ಬೃಹತ್ ಬೊಂಬೆ ಮನೆ ಸೃಷ್ಟಿಯಾಗಿದೆ.
ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ, ದಸರಾ ವೈಭವ, ರಾಜಮನೆತನದ ನೃತ್ಯ ವೈಭವ, ದಶಾವತಾರ, ನವದುರ್ಗಿಯರು, ಅಷ್ಟ ಲಕ್ಷ್ಮಿಯರು, ನವದುರ್ಗಿಯರು, ಕೃಷ್ಣಲೀಲೆ, ರಾಮಾಯಣ ಕಥಾಸಾರ, ಬುಡಕಟ್ಟು ಸಂಸ್ಕೃತಿ, ವೈವಿಧ್ಯಮಯ ಗಣೇಶ, ದೇವಾನುದೇವತೆಗಳು, ಪುರಾಣದಲ್ಲಿದ್ದ ಗುರುಪರಂಪರೆ, ಸಂಗೀತೋತ್ಸವ, ಹಿತ್ತಾಳೆ, ಮರದ ಪಾತ್ರೆಗಳು, ರಾಜಾಸ್ತಾನಿ, ಚನ್ನಪಟ್ಟಣದ ಬೊಂಬೆಗಳು, ಸಂಗೀತ ವಾದ್ಯಗಳು, ಬಾರ್ಬಿ ಉತ್ಸವ, ಬಂಡಿಬಾಗಿಣ, ಕೃಷಿ ಸಂಪತ್ತು, ಗ್ರಾಮೀಣ ಸೊಗಡು, ಕುಲಕಸುಬುಗಳು, ಪಿಂಗಾಣಿ ವಸ್ತುಗಳು, ರಾವಣ ದರ್ಬಾರ್, ನಮ್ಮ ಚಂದ್ರಯಾನ ಹೀಗೆ ಒಂದೇ, ಎರಡೇ. ಸರಿಸುಮಾರು ಮಾದರಿಯ ಬೊಂಬೆಗಳನ್ನು ನೋಡುಗರ ಮನ ತಣಿಸುತ್ತಿವೆ. 54 ವಿವಿಧ ಜೋಡಿಸಿಟ್ಟಿದ್ದು ನೋಡುಗರ ಮನ ತಣಿಸುತ್ತಿವೆ.
