ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಖಂಡಿಸಿ ಹಾಗೂ ಬೆಂ ಗಳೂರಿನಲ್ಲಿ ಬಂಧಿಸಿರುವ ಕರವೇ ಕಾರ್ಯಕರ್ತರು ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ನಾಡು, ನುಡಿ, ನೆಲ, ಭಾಷೆ, ವಿದ್ಯಾರ್ಥಿ ಹಾಗೂ ರೈತರ ಸಮಸ್ಯೆಗಳ ವಿರುದ್ಧ ನಾಡಿನಾದ್ಯಂತ ಕಾನೂನಾತ್ಮಕವಾಗಿ ಚಳುವಳಿ ನಡೆಸುತ್ತಿ ರುವ ಕರವೇ ಕಾರ್ಯಕರ್ತರು ಬಂಧಿಸಿರುವುದು ಸರಿಯಲ್ಲ ಎಂದರು.
ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಹಿಂದಿ ಭಾಷಾ ಸಮಿತಿ ಕಾರ್ಯಕ್ರಮವನ್ನು ವಿ ರೋಧಿಸಿ ಕರವೇ ಕಾರ್ಯಕರ್ತರು ಚಳುವಳಿ ನಡೆಸಿದ್ದಾರೆ. ಆದರೆ ರಾಜ್ಯಸರ್ಕಾರ ಹಿಂದಿ ಭಾಷಿಗರನ್ನು ಬೆಂಬಲಿಸಿ ಅನ್ಯಾಯವಾಗಿ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವ ರನ್ನು ಬಿಡುಗಡೆಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ದೇಶದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಭಾಷೆ ಹೊರತಾಗಿ ದ್ವಿಭಾಷಾ ನೀತಿ ಜಾರಿಗೊಳಿಸಲಾಗಿದೆ. ಆ ದರೆ ರಾಜ್ಯ ಸರ್ಕಾರ ಕನ್ನಡಕ್ಕಿಂತ, ಹಿಂದಿ ಮೇಲೆ ಪ್ರೇಮಕ್ಕೆ ಹೆಚ್ಚಾಗಿ ಪ್ರಚಾರಕ್ಕೆ ಮುಂದಾಗಿರುವುದು ವಿಪ ರ್ಯಾಸ. ಇದರಿಂದ ಭಾಷಾಭಿಮಾನ ಅಳವಡಿಸಿಕೊಂಡಿರುವ ಕೋಟ್ಯಾಂತರ ಕನ್ನಡಿಗರಿಗೆ ನೋ ವುಂಟಾ ಗಿದೆ ಎಂದು ತಿಳಿಸಿದರು
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಎಲ್ಲಾ ಭಾಷೆಗಳಿಗಿಂತ ಹಿರಿತನ ಹೊಂ ದಿದೆ. ನಾಡಿನಲ್ಲಿ ಕವಿಸಂತರು, ದಾರ್ಶನಿಕರು, ವಚನಕಾರರು, ಕೀರ್ತನಾಕಾರರು ಜನಿಸಿದ ಪುಣ್ಯಭೂಮಿ. ಈ ಕನ್ನಡ ಭೂಮಿಯಲ್ಲಿ ಹಿಂದಿ ಭಾಷೆ ಏರಿಕೆಗೊಳಿಸುವ ಮೂಲಕ ಕನ್ನಡ ಭಾಷೆಯನ್ನು ನಶಿಸುವಂಥ ಕೆಲ ಸವಾಗುತ್ತಿದೆ ಎಂದು ಹೇಳಿದರು.
ಕೂಡಲೇ ರಾಜ್ಯಸರ್ಕಾರ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಿ ದ್ವಿಭಾಷಾ ನೀತಿಯ ನ್ನು ಜಾರಿಗೊಳಿಸಬೇಕು. ಕನ್ನಡದ ಪರವಾಗಿ ಚಳುವಳಿ ನಡೆಸಿರುವ ಪ್ರಾಮಾಣಿಕ ಕರವೇ ಕಾರ್ಯಕರ್ತರ ನ್ನು ಬಿಡುಗಡೆಗೊಳಿಸಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಬೇಕಾಗು ತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಕೋಟೆ ಮಲ್ಲೇಶ್, ದಶರತ್ ರಾಜ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್ ಹಲ್ಮಿಡಿ, ತಾಲೂಕು ಅಧ್ಯಕ್ಷ ಮನೋಜ್, ಸಂಘಟನಾ ಕಾರ್ಯದರ್ಶಿ ಶಶಿ, ಸಹಕಾರ್ಯದರ್ಶಿ ಮಧು, ಸಂಚಾಲಕರದ ಯುವರಾಜ್, ತಾಲೂಕು ಮಹಿಳಾಧ್ಯಕ್ಷೆ ಪೂರ್ಣಿಮಾ, ಮುಖಂಡರುಗಳಾದ ಅಶೋಕ್ ಶೆಟ್ಟಿ, ಮಂಜುಳಾಬಾಯಿ, ಇರ್ಷಾ ದ್ ಅಹ್ಮದ್, ಸಾದಿಕ್, ಪ್ರಸನ್ನ ಮತ್ತಿತರರಿದ್ದರು.
