ಚಿಕ್ಕಮಗಳೂರು: ತಾಲೂಕಿನ ಕಬ್ಬಿಣ ಸೇತುವೆ ಕೆಳಗೂರು ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರು, ಸದಸ್ಯರು ಇಂದು ಬೀಗ ಜಡಿದು ಪ್ರತಿಭಟಿಸಿದರು.
ಅಧಿಕಾರಿಗಳು ಗ್ರಾಮದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿ, ಸ್ಥಳೀಯ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರು, ಸದಸ್ಯರು ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಹಾಗೆ ಉನ್ನತ ಅಧಿಕಾರಿಗಳು ಬರುವವರೆಗೂ ಕಚೇರಿ ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
11 ಸದಸ್ಯರನ್ನು ಹೊಂದಿದ ದೊಡ್ಡ ಗ್ರಾಮ ಪಂಚಾಯಿತಿ ಇದು. ಆದರೆ, ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಕುಂಠಿತಗೊಂಡಿವೆ. ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. PDO ವರ್ಗಾವಣೆಗೊಂಡು ಒಂದು ತಿಂಗಳ ಮೇಲಾಗಿದೆ ಇನ್ನು ಖಾಯಂ PDO ನೇಮಕವಾಗಿಲ್ಲ. ಈ ವಿಚಾರವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ನಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ’ ಎಂದು ಸದಸ್ಯರಾದ ಸ್ವರೂಪ್ ಗೌಡ ದೂರಿದರು.
ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿದ ADLR ವಿಶ್ವನಾಥ್ ಇನ್ನೇರೆಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಪ್ರತಿಭಟನೆ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯ, ಸದಸ್ಯರಾದ ಸ್ವರೂಪ್, ರವಿ, ಮಂಜಯ್ಯ ದೇವರಾಜ್, ಮೇಘಶ್ರೀ, ಕುಸುಮ ಜಿನ್ನಾಪ್ಪ, ಮಂಜುಳಾ ಸೇರಿದಂತೆ ಗ್ರಾಮಸ್ಥರು ಇದ್ದರು.
