Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ : ವೀರೇಂದ್ರ ಹೆಗ್ಗಡೆ ಜನ್ಮದಿನ: ಬಕ್ಕಿ ಗ್ರಾಮದ ಅಂಗವಿಕಲೆ ಮನೆ ಸುತ್ತಲು ಶೌರ್ಯವಿಪತ್ತು ತಂಡದಿಂದ...

ಮೂಡಿಗೆರೆ : ವೀರೇಂದ್ರ ಹೆಗ್ಗಡೆ ಜನ್ಮದಿನ: ಬಕ್ಕಿ ಗ್ರಾಮದ ಅಂಗವಿಕಲೆ ಮನೆ ಸುತ್ತಲು ಶೌರ್ಯವಿಪತ್ತು ತಂಡದಿಂದ ಶ್ರಮದಾನ

Telegram Group
Join Now

ಮೂಡಿಗೆರೆ : ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದ ಸ್ವಯಂ ಸೇವಕರು ವಿಶಿಷ್ಟ ಸೇವಾ ಚಟುವಟಿಕೆ ನಡೆಸಿದರು.

ಅಂಗವಿಕಲರಾದ ಶೋಭಾ ಅವರ ಮನೆ ಸುತ್ತಮುತ್ತ ಸ್ವಚ್ಛತೆ ಕಾರ್ಯ ನಡೆಸಿದ ಸ್ವಯಂಸೇವಕರು, ಬಳಿಕ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಸೇವಾಭಾವಕ್ಕೆ ಮತ್ತೊಂದು ಮೆರಗು ನೀಡಿದರು.

ಬಕ್ಕಿ ಘಟಕದ ಸ್ವಯಂಸೇವಕರು ಸದಾ ಒಂದಲ್ಲೊಂದು ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೂಜ್ಯರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸುವ ಮೂಲಕ, ಅವರ ಆದರ್ಶ ಜೀವನವನ್ನು ಮೈಗೂಡಿಸಿಕೊಳ್ಳಲು ನಾವು ಸಿದ್ದ ಎಂಬ ಸಂದೇಶವನ್ನೂ ನೀಡಿದರು.

ಈ ಸೇವಾ ಕಾರ್ಯದಲ್ಲಿ ವಲಯದ ಮೇಲ್ವಿಚಾರಕರಾದ ಸಂದೀಪ್, ಸಂಯೋಜಕರಾದ ಉಷಾ, ಘಟಕ ಪ್ರತಿನಿಧಿ ಪ್ರಕಾಶ್, ಸ್ವಯಂಸೇವಕರಾದ ಅಕ್ಷತ್, ಸುದೀಪ್, ವಿಜಿತ್, ಶ್ರೀಧನ್, ಸರಿತಾ, ವಂದನ, ನೇತ್ರ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments