Thursday, February 19, 2026
Homeಕ್ರೈಮ್ಚಿಕ್ಕಮಗಳೂರು: ನಿವೃತ್ತ ಬ್ಯಾಂಕ್‌ ಸಿಬ್ಬಂದಿಗೆ ಫೇಸ್‌ ಬುಕ್‌ ಮೂಲಕ ವಂಚನೆ: ಎಫ್ ಡಿ ಖಾತೆಯಲ್ಲಿದ್ದ ಹಣ...

ಚಿಕ್ಕಮಗಳೂರು: ನಿವೃತ್ತ ಬ್ಯಾಂಕ್‌ ಸಿಬ್ಬಂದಿಗೆ ಫೇಸ್‌ ಬುಕ್‌ ಮೂಲಕ ವಂಚನೆ: ಎಫ್ ಡಿ ಖಾತೆಯಲ್ಲಿದ್ದ ಹಣ ಗುಳುಂ

ಚಿಕ್ಕಮಗಳೂರು: ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮಹಿಳಾ ನೌಕರರೊಬ್ಬರಿಗೆ ಫೇಸ್ ಬುಕ್ ನಲ್ಲಿ BOB PENSION CARD ಎಂಬ ಜಾಹೀರಾತು ಬಂದಿದ್ದು ಅದನ್ನು ಕ್ಲಿಕ್ಕಿಸಿದ್ದಾರೆ. ಅದರಲ್ಲಿ ಕೇಳಿರುವಂತೆ ಪೋನ್ ನಂಬರ್ ಮತ್ತು ಕೆಲಸವನ್ನು ನಮೂದಿಸಿದ್ದಾರೆ .ನಂತರ ಅನುಮಾನ ಬಂದು ಸದರಿ ಅಪ್ಲೀಕೇಷನ್ ನಿಂದ ವಾಪಸ್ ಬಂದಿರುತ್ತಾರೆ.

ಮಧ್ಯಾಹ್ನದ ವೇಳೆಗೆ ಮೋಬೈಲ್ ನಂಬರ್ ಗೆ ಪೋನ್ ಬಂದಿದ್ದು ತನ್ನ ಹೆಸರು ಶ್ಯಾಮ್ ಎಂದೂ ಬ್ಯಾಂಕ್ ಆಫ್ ಬರೋಡಾದ ಪೆನ್ ಷನ್ ಕಾರ್ಡ್ ವಿಭಾಗದಿಂದ ಮಾತನಾಡುತ್ತಿದ್ದೇನೆ ಎಂದು ನಂಬಿಸಿದ್ದಾರೆ.
ಪೆನ್ ಷನ್ ಕಾರ್ಡ್ ಮಾಡಿಕೊಡುತ್ತೇನೆ ಎಂದು ಹೇಳಿ ವಾಟ್ಸ್ ಆಫ್ ಅನ್ನು ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡಿದ್ದಾನೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಎಫ್ ಡಿ ಖಾತೆಯಲ್ಲಿ 5,00,000/- ರೂಗಳನ್ನು ಒಂದು ವಾರದ ಹಿಂದೆ ಡೆಪಾಸಿಟ್ ಮಾಡಿದ್ದು , ಈ ಎಫ್ ಡಿ ಖಾತೆಯಿಂದ ತನ್ನ ಬಾಬ್ತು ಬ್ಯಾಂಕ್ ಆಫ್ ಬರೋಡಾದ ಎಸ್ ಬಿ ಖಾತೆಗೆ 4,75,000/- ರೂ ಓವರ್ ಡ್ರಾಪ್ಟ್ ಆನ್ ಎಫ್ ಡಿ ಆಗಿರುವ ಬಗ್ಗೆ ಪೋನ್ ಗೆ ಮೆಸೇಜ್ ಬಂದಿದೆ.
ನಂತರ ಖಾತೆಯಿಂದ 1,50,000/- ರೂ ಡ್ರಾ ಆಗಿದ್ದು, ತಕ್ಷಣ ನನಗೆ ಇದು ಪ್ರಾಡ್ ಪೋನ್ ಕಾಲ್ ತಿಳಿದು ಪೋನ್ ಸಂಪರ್ಕ ಕಡಿತಗೊಳಿಸಿ ಬ್ಯಾಂಕ್ ಗೆ ಪೋನ್ ಮಾಡಿ ತನ್ನ ಅಕೌಂಟ್ ಅನ್ನು ಬ್ಲಾಕ್ ಮಾಡಿಸಿದ್ದಾರೆ.

ಪೆನ್ ಷನ್ ಕಾರ್ಡ್ ಮಾಡಿಸಿಕೊಡುವುದಾಗಿ ನಂಬಿಸಿ ವಾಟ್ಸ್ ಆಫ್ ಸ್ಕ್ರೀನ್ ಶೇರಿಂಗ್ ಮಾಡಿಸಿಕೊಂಡು ತನ್ನ ಎಫ್ ಡಿ ಖಾತೆಯಿಂದ 4,75,000/- ರೂ ಲೋನ್ ಮಾಡಿ ಅದರಲ್ಲಿ 1,50,000/- ರೂಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!