ಚಿಕ್ಕಮಗಳೂರು: ನಗರದ ಮಲ್ಲಂದೂರು ರಸ್ತೆಯಲ್ಲಿ ಜನವರಿ 17ರಂದು ಶಾಲಾ ಬಸ್ ಚಾಲಕನನ್ನು ಹೆದರಿಸಿ ಆಟೋದಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ, ಹಲ್ಲೆ ಮಾಡಿ, ರೂ. 8,500 ನಗದು ಕಿತ್ತುಕೊಂಡು ಹೋಗಿದ್ದ ಪ್ರಕರಣದಲ್ಲಿ ಬಸವನಹಳ್ಳಿ ಪೊಲೀಸರು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕಿತ್ತುಕೊಂಡು ಹೋಗಿದ್ದ ಹಣ, ಕೃತ್ಯಕ್ಕೆ ಬಳಸಿದ ಆಟೋರಿಕ್ಷಾ ವಶಪಡಿಸಿಕೊಂಡಿದ್ದು, ಪೊಲೀಸ್ ತಂಡದಲ್ಲಿ ಸಿಪಿಐ ಬಸವನಹಳ್ಳಿ ವೃತ್ತ ಶ್ರೀ. ವಿಜಯ್ ಕುಮಾರ್ ಬಿರಾದಾರ್, ಪಿಎಸ್ಐ ಶ್ರೀ. ಕೀರ್ತಿಕುಮಾರ್ ಮತ್ತು ಶ್ರೀ. ಅಜರುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ. ರವೀಂದ್ರ, ಶ್ರೀ. ರಾಜ್ ಕುಮಾರ್, ಶ್ರೀ. ಲಿಂಗಮೂರ್ತಿ, ಶ್ರೀ. ಮಧುಸೂಧನ್, ಶ್ರೀ. ಜಯರಾಮ ಮತ್ತು ಶ್ರೀ. ಚಂದ್ರಶೇಖರ್ ರವರು ಕಾರ್ಯನಿರ್ವಹಿಸಿರುತ್ತಾರೆ.
