ಚಿಕ್ಕಮಗಳೂರು: ಸ್ಕೂಟರ್ʼಗೆ ಟಿಪ್ಪರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕುದುರೆಮುಖ ಸಮೀಪದ ಎಸ್ಕೆ ಬಾರ್ಡರ್ ಬಳಿ ಈ ಅಪಘಾತ ಸಂಭವಿಸಿದೆ.
ಹೌದು .. ಮೃತರನ್ನು ನವೀನ್ ಬಜಗೋಳಿ ಎಂದು ಗುರುತಿಸಲಾಗಿದೆ. ನವೀನ್ ಎಂಬುವರು ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು ಜೊತೆಗೆ ಹಾವು ಹಿಡಿಯುವ ಕೆಲಸ ಸಹ ಮಾಡುತ್ತಿದ್ದರು. ಈ ವೇಳೆ ಇಂದು ಬೆಳಗ್ಗೆ ಹಾವೊಂದು ಹಿಡಿದು ಕಾಡಿಗೆ ಬಿಡಲೆಂದು ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಸ್ಕೂಟಿಯಲ್ಲಿದ್ದ ಮತ್ತೊಬ್ಬ ಸವಾರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
