Friday, August 14, 2026
Homeಕ್ರೈಮ್ಮಂಗಳೂರು: ಮಸೀದಿ‌ ವಿಚಾರ ಭಿನ್ನಾಭಿಪ್ರಾಯ: ಎರಡು ತಂಡಗಳ‌ ನಡುವೆ ಮಾರಾಮಾರಿ!

ಮಂಗಳೂರು: ಮಸೀದಿ‌ ವಿಚಾರ ಭಿನ್ನಾಭಿಪ್ರಾಯ: ಎರಡು ತಂಡಗಳ‌ ನಡುವೆ ಮಾರಾಮಾರಿ!

Telegram Group
Join Now

ದಕ್ಷಿಣ ಕನ್ನಡ: ಮಸೀದಿ‌ ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಎರಡು ತಂಡಗಳ‌ ಸದಸ್ಯರು ಬಡಿದಾಡಿಕೊಂಡ ನಡೆದ ಘಟನೆ ಮಂಗಳೂರಿನ ಉಳ್ಳಾಲ ಸಜೀಪ‌ನಡು ಎಂಬಲ್ಲಿ ನಡೆದಿದೆ.

ಸಜಿಪ ಪಡು ತಲೆಮೊಗರು ಬದ್ರಿಯಾ ಜುಮ್ಮಾ ಮಸೀದಿ ಬಳಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಕತ್ತಿ,ದೊಣ್ಣೆ,ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ.

ಮಸೀದಿ ಬಳಿ ಹಲ್ಲೆ ನಡೆದ ಬಳಿಕ ಓರ್ವನ ಮನೆಗೆ ಬಂದು ಅಲ್ಲಿದ್ದ ಮಹಿಳೆಯರು ಮಕ್ಕಳ‌ ಮುಂದೆ ಹಲ್ಲೆ‌ ನಡೆಸಲಾಗಿದೆ. ಮಸೀದಿ‌ ಅಧ್ಯಕ್ಷನೂ ಈ‌ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಮತ್ತು ಆರ್ಮ್ಸ್‌ ಆಕ್ಟ್‌ ಅಡಿ ಅಡಿ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments