Wednesday, February 18, 2026
Homeಕ್ರೈಮ್ಚಿಕ್ಕಮಗಳೂರು: ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ಕೇಸ್:‌ ಸಿ.ಟಿ.ರವಿ ತೀವ್ರ ಖಂಡನೆ!

ಚಿಕ್ಕಮಗಳೂರು: ಹಿಂದೂಗಳ ಮನೆ ಮೇಲೆ ಕಲ್ಲು ತೂರಾಟ ಕೇಸ್:‌ ಸಿ.ಟಿ.ರವಿ ತೀವ್ರ ಖಂಡನೆ!

ಚಿಕ್ಕಮಗಳೂರು : ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣದ ಘಟನೆಯನ್ನ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಹೌದು .. ಸೋಮವಾರ ತಡರಾತ್ರಿ ಸುಧಾ ಎನ್ನುವರ ಮನೆ ಮೇಲೆ‌ ಕಲ್ಲು ತೂರಾಟವಾಗಿತ್ತುೀ ಹಿನ್ನೆಲೆಯಲ್ಲಿ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಸಿ.ಟಿ.ರವಿ ಹಿಂದೂಗಳನ್ನೇ ಕೇಂದ್ರವಾಗಿರಿಸಿಕೊಂಡು ಗಲಭೆ ಎಬ್ಬಿಸುವ ಒಳ ಸಂಚು ಎಂದಿದ್ದಾರೆ. ಹಾಗೆ ತಪ್ಪಿತಸ್ಥರ ವಿರುದ್ದ ಕಠಿಣ ಪೊಲೀಸ್ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

ದಲಿತ ಮಹಿಳೆ ಸುಧಾ ಎನ್ನುವರ ಮನೆ ಮೇಲೆ ಕಲ್ಲು ಎಸೆತಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದು ಅಪ್ರಾಪ್ತ ಬಾಲಕರಿಗೆ ಕಲ್ಲು ಎಸೆಯುವ ವಿಕೃತ ಮನಸ್ಥಿತಿ ಅಪ್ರಾಪ್ತ ಬಾಲಕರಿಗೆ ಇಂತಹ ಕಲ್ಪನೆಗಳು, ಹೋರಾಟದ ಹಿನ್ನೆಲೆ ಏನು ಇದನ್ನು ಸಮರ್ಥನೆ ಮಾಡಿಕೊಂಡವರ ಸೂಕ್ತ ವಿಚಾರಣೆ ಮಾಡಬೇಕು ಹಾಗೆ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿರುವುದನ್ನು ಸಿ.ಟಿ.ರವಿ ಅವರು ಕಟುವಾಗಿ ಟೀಕಿಸಿದ್ದಾರೆ.

ಹಾಗೆ ಈ ಪ್ರಕರಣವನ್ನು ಸಮಗ್ರವಾಗಿ, ಕೂಲಂಕುಷವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜುರುಗಿಸಬೇಕೆಂದು ಸಿ.ಟಿ. ರವಿ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!