Thursday, March 26, 2026
Homeಕ್ರೈಮ್ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಮುಖಂಡರು ಸೇರಿ ಐವರ ವಿರುದ್ಧ ಸುಮೋಟೋ ಕೇಸ್

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಮುಖಂಡರು ಸೇರಿ ಐವರ ವಿರುದ್ಧ ಸುಮೋಟೋ ಕೇಸ್

ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಿನ್ನೆಲೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ, ಹಾಸನ ವಿಭಾಗದ ಬಜರಂಗದಳ ಸಹ ಸಂಚಾಲಕನ  ಮೇಲೆ ದೂರು ದಾಖಲಾಗಿದೆ.

ಸಂತೋಷ್, ಶಾಮ್ ಸೇರಿ ಒಟ್ಟು ಐವರ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಪೊಲೀಸರು  ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ಗೋ ಹತ್ಯೆ ಖಂಡಿಸಿ ಮೊನ್ನೆ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಗೋ‌ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಖಡ್ಗದ ಚಿತ್ರ ಬಳಸಿ  ಬಲಿಗೆ ಹಸಿದಿಹ ಶಸ್ತ್ರ ಹಿಡಿಯುತ ಗೋ  ಹಂತಕರೆದೆಯ ಸೀಳಿರಿ, ಗೋಮಾತೆ ರಕ್ಷಣೆಗೆ ಹಿಂದುಗಳೇ ಒಂದಾಗಿ ಬನ್ನಿ ಎಂದು ಪ್ರಚೋದನಾಕಾರಿ ಪೋಸ್ಟ್‌ ಹಂಚಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಕರೆ ನೀಡಿದಾಗ ಈ ಪೋಸ್ಟ್ ಹಾಕಿಕೊಂಡಿದ್ದವರ ವಿರುದ್ಧ  ಚಿಕ್ಕಮಗಳೂರು ನಗರ ಠಾಣಾ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!