Friday, March 27, 2026
Homeಕ್ರೈಮ್ಚಿಕ್ಕಮಗಳೂರು: ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಕಾರಾಗೃಹಗಳನ್ನು ಕೇಂದ್ರ ಗೃಹ ಇಲಾಖೆಯೇ ನಿರ್ವಹಣೆ ಮಾಡಲಿ

ಚಿಕ್ಕಮಗಳೂರು: ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಕಾರಾಗೃಹಗಳನ್ನು ಕೇಂದ್ರ ಗೃಹ ಇಲಾಖೆಯೇ ನಿರ್ವಹಣೆ ಮಾಡಲಿ

ಚಿಕ್ಕಮಗಳೂರು:  ಕಾರಾಗೃಹಗಳ ಅಕ್ರಮ ಚಟುವಟಿಕೆ ನಿಯಂತ್ರಣ, ಭಯೋತ್ಪಾದ ಕರಿಗೆ ಮತ್ತು ನಕ್ಸಲೀಯರಿಗೆ ಪ್ರತ್ಯೇಕ ಕಾರಾಗೃಹಗಳನ್ನು ತೆರೆದು ಕೇಂದ್ರ ಗೃಹ ಇಲಾಖೆಯೇ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ಮುಖಂಡರುಗಳು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ರಾಷ್ಟ್ರದ ವಿರುದ್ಧ ಸಂಚು ರೂಪಿಸಿರುವ ಉಗ್ರರು ಮತ್ತು ದುಕೃತ್ಯವೆಸಗಿ ಸೆರೆವಾಸ ಅನುಭವಿಸುತ್ತಿರುವ ಕಾರಾಬಂದಿಗಳು ಕುಣಿ ದು ಕುಪ್ಪಳಿಸಲು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಮೋಜಿನ ತಾಣವಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಹಳಷ್ಟು ಹದೆಗಟ್ಟಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾ ಟದ ಕಾರಾಗೃಹಗಳು ಐಷರಾಮಿ ಕೊಠಡಿಗಳನ್ನಾಗಿಸಿ ಸರ್ಕಾರ ದುರಾಡಳಿತವನ್ನು ನಡೆಸುತ್ತಿದೆ. ಅಲ್ಲದೇ ಪರಪ್ಪನ ಜೈಲು ಪ್ರಸ್ತುತ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಕೇಂದ್ರಗಳಾಗಿ ಖೈದಿಗಳಿಗೆ ಮನರ ಂಜನೆಯ ಕೇಂದ್ರವಾಗುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರದ್ರೋಹಿ, ಅತ್ಯಾಚಾರಿ, ಉಗ್ರಗ್ರಾಮಿ ಹಾಗೂ ಕಳ್ಳಸಾಗಾಣೆದಾರರು ಕಾರಾಗೃಹಗಳಿಂದ ಐಶರಾಮಿ ಸೌಲಭ್ಯವನ್ನು ಪಡೆದುಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಕಾರಾಗೃಹವು ಖೈದಿಗಳ ಮನ ಪರಿವರ್ತಿಸುವ ಕೇಂದ್ರಗಳಾಗಬೇಕು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಉಗ್ರತಾಣಗಳ ಕ್ಲಬ್‌ಗಳಾಗುತ್ತಿರುವು ದು ನಾಚಿಕೇಡಿತನ ಸಂಗತಿ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!