Tuesday, August 11, 2026
Homeಕ್ರೈಮ್ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಗಣೇಶ್‌ ಹತ್ಯೆ ಕೇಸ್‌ಗೆ ಟ್ವಿಸ್ಟ್:‌ ಮೃತನ ವಿರುದ್ಧವೇ FIR ದಾಖಲಿಸಿದ ಆರೋಪಿ ಸಂಜಯ್!

ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಗಣೇಶ್‌ ಹತ್ಯೆ ಕೇಸ್‌ಗೆ ಟ್ವಿಸ್ಟ್:‌ ಮೃತನ ವಿರುದ್ಧವೇ FIR ದಾಖಲಿಸಿದ ಆರೋಪಿ ಸಂಜಯ್!

Telegram Group
Join Now

ಚಿಕ್ಕಮಗಳೂರು: ಸಖರಾಯಪಟ್ಟಣ ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಹತ್ಯೆ ಪ್ರಕರಣಕ್ಕೆ ಈಗ ಟ್ವಿಸ್ಟ್ ದೊರೆತಿದೆ. ಈ ಕೊಲೆ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಪ್ರಮುಖ ಆರೋಪಿ ಸಂಜಯ್ ಇದೀಗ ಮೃತ ಗಣೇಶ್ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂಜಯ್ ನೀಡಿದ ದೂರಿನಲ್ಲಿ ಮೃತ ಗಣೇಶ್‌, ಕತ್ತೆ ಸಂದೀಪ, ಕೋಳಿ ಅಂಗಡಿ ಅಪ್ಪು,ಚಂದು, ಅಭಿ, ಬಿಂದು ,ರೋಷನ್ ಹಾಗೂ ಶ್ರೀಕಾಂತ್ ಅವರನ್ನು ಉಲ್ಲೇಖಿಸಲಾಗಿದೆ. ಆರಂಭದಲ್ಲಿ ದತ್ತ ಜಯಂತಿಯಂದು ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ತೆಗೆಯುವ ವಿಚಾರದಲ್ಲಿ ಗಲಾಟೆ ನಡೆದು ಈ ಕೊಲೆ ಸಂಭವಿಸಿದೆ ಎಂದು ಹೇಳಲಾಗಿತ್ತಾದರೂ ಪೊಲೀಸರ ತನಿಖೆಯಲ್ಲಿ ಹಳೆ ವೈಷಮ್ಯವೇ ಮುಖ್ಯ ಕಾರಣವಾಗಿರುವ ಸಾಧ್ಯತೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ

ಡಿಸೆಂಬರ್ 5 ರ ರಾತ್ರಿ ಸಖರಾಯಪಟ್ಟಣದ ಮಠದ ಗುತ್ತಿ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ಹಾಗೂ ಗಣೇಶ್‌ಗೌಡ ಟೀಂ ನಡುವೆ ಗ್ಯಾಂಗ್‌ವಾರ್ ಆಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಬ್ಯಾನರ್, ಫ್ಲೆಕ್ಸ್ ತೆರುವ ಮಾಡುವಾಗ, ‘‘ಇವರದ್ದು ಜಾಸ್ತಿಯಾಯ್ತು’’ ಎಂದು ಗಣೇಶ್‌ ಗೌಡ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಟ್ರಾಕ್ಟರ್‌ನಲ್ಲಿ ಬಂದ ನಾನು ಗಲಾಟೆ ವಿಷಯವಾಗಿ ಗಣೇಶ್‌ಗೆ ಪ್ರಶ್ನೆ ಮಾಡಿದ್ದೆ ಎಂದು ಸಂಜಯ್‌ ಹೇಳಿದ್ದಾನೆ. ಇದರಿಂದ ಗಣೇಶ್ ಮತ್ತು ನಮ್ಮ ನಡುವೆ ‌ಜಗಳವಾಯಿತು . ಬಳಿಕ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಸಂದೀಪ್ ಜೊತೆ ಗಣೇಶ್ 8 ಕ್ಕೂ ಅಧಿಕ ಯುವಕರೊಂದಿಗೆ ಬಂದು ಮಚ್ಚಿನಿಂದ ಹಲ್ಲೆ ಮಾಡಿದ್ದ ಎಂದು ನಾಗಭೂಷಣ್ ಹಾಗೂ ಸಂಜಯ್ ‌ಆರೋಪಿಸಿದ್ದಾರೆ. ಇವರ ದೂರು ಆಧರಿಸಿ ಮೃತ ‌ಗಣೇಶ್‌ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ಸಂದೀಪ್, ಅಪ್ಪು, ಚಂದು,ಅಭಿ, ಬಿಂದು, ರೋಷನ್‌ ಸೇರಿದಂತೆ 8 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ.

ಸದ್ಯ ಸಖರಾಯಪಟ್ಟಣದಲ್ಲಿ ಮೃತ ಗಣೇಶ್‌ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್‌ ಐ ಆರ್‌ ದಾಖಲಾಗಿದ್ದು ಕೊಲೆ ಯಾರು ಏಕೆ ಮಾಡಿದ್ದಾರೆ ಎಂಬಾ ಸತ್ಯಾಂಶವು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments