ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಮಾಡಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಚಿಕ್ಕಮಗಳೂರು ತಾಲೂಕಿನ ಸಾರಗೋಡು, ಮತ್ತಿಖಂಡ ಗ್ರಾಮದಲ್ಲಿ ಮನೆಗಳು ಕುಸಿದು ಹಾನಿ ಸಂಭವಿಸಿದೆ.
ಮತ್ತಿಖಂಡ ಗ್ರಾಮದ ಶೇಖರ್ ಎಂಬುವವರ ಮನೆ ಕುಸಿತಗೊಂಡಿದ್ದು ತಾತ್ಕಾಲಿಕವಾಗಿ ಬಂಧು ಬಳಗದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಹಾಗೆ ಸಾರಗೋಡು ಗ್ರಾಮದ ಲಕ್ಷ್ಮೀ ಎಂಬುವವರ ಮನೆ ಕೂಡ ಸಂಪೂರ್ಣ ಕುಸಿಯುವ ಆತಂಕದಲ್ಲಿದ್ದಾರೆ.
ಮನೆಯೊಳಗಿದ್ದ ಸಾವಿರಾರು ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದು, ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
