Friday, February 13, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಯುವಕ ನೀರುಪಾಲು: ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ!

ಚಿಕ್ಕಮಗಳೂರು: ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಯುವಕ ನೀರುಪಾಲು: ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ!

ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿದ್ದ ವ್ಯಕ್ತಿಯೋರ್ವನನ್ನು ರಕ್ಷಣೆ ಮಾಡಲು ಹೋದ ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ನಡೆದಿದೆ.

ಸಾದರಹಳ್ಳಿ ಗ್ರಾಮದ ಯತೀಶ್ (25) ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕನಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ. ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿರುವ ಸ್ಮಶಾನದ ಹಳ್ಳ ತುಂಬಿ ರಸ್ತೆ ಮೇಲೆ ಹರಿಯುತ್ತಿದ್ದು ಬ್ಯಾರಿಕೇಡ್‌ ಇಟ್ಟ ಸಾರ್ವಜನಿಕರು ವಾಃನ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕಾಗುತ್ತಿತ್ತು.

ಈ ವೇಳೆ ಗುರುವಾರ ಬೆಳಗ್ಗೆ ಯತೀಶ್ ಹಾಗೂ ಆತನ ಸ್ನೇಹಿತ ಬೈಕ್‌ನಲ್ಲಿ ಈ ರಸ್ತೆಯ ಮೇಲೆ ಹೋಗಿದ್ದು, ರಸ್ತೆಯ ಮೇಲೆ ರಭಸದಿಂದ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಬೈಕ್ ದಾಟಿಸಲು ಹೋದ ವೇಳೆ ಸವಾರ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತನ ರಕ್ಷಣೆ ಮಾಡಲು ಯತೀಶ್‌ ಮುಂದಾಗಿದ್ದು ನಿಯಂತ್ರಣ ತಪ್ಪಿ ಅವನೂ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಸ್ವನೇಹಿತನು ಪ್ರಾಣಾಪಾಯದಿಂದ ಉಳಿದಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಯತೀಶ್‌ ಸುಳಿವು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!